ಮಳವಳ್ಳಿ ತಾಲೂಕಿನ ವಿವಿಧೆಡೆ ಬಸವ ಜಯಂತಿ

23 mlv 1
ಮಳವಳ್ಳಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ದಯಾಶಂಕರ್, ಮಿಲ್ಟ್ರೀ ಸುರೇಶ್, ಎವಿಟಿ ಕುಮಾರ್, ಸುಬ್ರಮಣ್ಯಸ್ವಾಮಿ, ಶಿವಸ್ವಾಮಿ ಇದ್ದರು.
Published on

ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಬಸವೇಶ್ವರರ ಜಯಂತ್ಯುತ್ಸವನ್ನು ಭಾನುವಾರ ವಿವಿಧ ಸಂಘಟನೆಗಳು ಹಾಗೂ ಸರ್ವ ಸಮಾಜದ ಜನರು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ವಿವಿಧ ಸಂಘಟನೆಗಳ ಸಹಕಾರದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನಡೆಸಲಾಗಿತ್ತು. ಪರಿಸರ ಪ್ರೇಮಿ ಸಾಲುಮರ ನಾಗರಾಜು ನೆರೆದವರಿಗೆ ಗಿಡಗಳನ್ನು ವಿತರಿಸಿದರು. ವಿಶ್ವಾಸ್, ಎಚ್.ಸಿ.ಮಹೇಶ್, ಎಚ್.ಎಂ.ಶಿವಸ್ವಾಮಿ, ದಯಾಶಂಕರ್, ಮಿಲ್ಟ್ರೀ ಸುರೇಶ್, ಎವಿಟಿ ಕುಮಾರ್, ಮಲ್ಲೇಶ್, ಸುಬ್ರಮಣ್ಯಸ್ವಾಮಿ, ಸಿದ್ದಲಿಂಗಸ್ವಾಮಿ, ಸುಂದ್ರಪ್ಪ ಇದ್ದರು.

ಬಸವೇಶ್ವರ ಪತ್ತಿನ ಸಹಕಾರ ಸಂಘದ ವತಿಯಿಂದ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವೃಷಭೇಂದ್ರ, ಉಪಾಧ್ಯಕ್ಷ ಜಗದೀಶ್ ಇತರರು ಇದ್ದರು. ರಾಗಿಬೊಮ್ಮನಹಳ್ಳಿ ಗ್ರಾಮದ ಬಸವ ಮಂಟಪದಲ್ಲಿ ಬಸವೇಶ್ವರ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. ಸಂಜೆ ಬಸವೇಶ್ವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ಬೆಳಕವಾಡಿ ಗ್ರಾಮದ ಸಿದ್ದಮಲ್ಲಿಕಾರ್ಜುನಸ್ವಾಮಿ ದಾಸೋಹ ಮಠದಲ್ಲಿ ಪ್ರಭುದೇವಸ್ವಾಮೀಜಿ ಅಧ್ಯಕ್ಷತೆಯಲ್ಲಿ ಬಸವಜಯಂತಿ ಆಚರಿಸಲಾಯಿತು. ಗ್ರಾಮದ ಮುಖಂಡರು ಇದ್ದರು.

ಉಪ್ಪನಹಳ್ಳಿ ಬಸವೇಶ್ವರ ಯುವಕರ ಸಂಘದಿಂದ ಗ್ರಾಮದಲ್ಲಿ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಹಂಗ್ರಾಪುರ, ಅವ್ವೇರಹಳ್ಳಿ, ನೆಲ್ಲಿಗೆರೆ, ಪೂರಿಗಾಲಿ, ಬಿಜಿ ಪುರ, ಹೊಸಹಳ್ಳಿ, ನಾರಾಯಣಪುರ, ಹಲಗೂರು, ಕಿರುಗಾವಲು, ಚಿಕ್ಕಮುಲಗೂಡು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಸವೇಶ್ವರ ಜಯಂತಿ ಆಚರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net