

ಮಳಖೇಡ: ಶ್ರೀ ಕೃಷ್ಣ ಜನ್ಮಾಷ್ಠಮಿ ನಿಮಿತ್ತ ಇಲ್ಲಿನ ಬ್ರಾಹ್ಮಣಗಲ್ಲಿಯಲ್ಲಿನ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಗೋಪಾಲಕೃಷ್ಣನ ರಥೋತ್ಸವವು ಗುರುವಾರದಂದು ವೈಭವದಿಂದ ಜರುಗಿತು.
ಈ ನಿಮಿತ್ತ ಬೆಳಗಿನ ಜಾವದಲ್ಲಿ ಪ್ರವಚನ, ಪೂಜೆ, ಭಜನೆ, ಶ್ರೀ ಕೃಷ್ಣನ ತೊಟ್ಟಿಲೋತ್ಸವ ಕಾರ್ಯಕ್ರಮಗಳು ಜರುಗಿದವು. ಸಂಜೆ ಭಕ್ತಾದಿಗಳು ದೇವಸ್ಥಾನದ ಎದುರಿಗೆ ಶ್ರೀ ಕೃಷ್ಣನ ರಥ ಎಳೆದು, ದರ್ಶನಾಶಿರ್ವಾದ ಪಡೆದು ಸಂಭ್ರಮಿಸಿದರು.
ವೆಂಕಟೇಶ ಕಡಿವಾಳ, ನಾರಾಯಣರಾವ ದೇಶಪಾಂಡೆ, ವರದರಾಜ ಮಾಸ್ಟರ್, ರಘುನಾಥ ದೇಶಪಾಂಡೆ, ನರಸಿಂಹಮೂರ್ತಿ, ಶ್ರೀಧರ, ಸುಧಾಕರ ದಂಡೋತಿ, ರಾಘವೇಂದ್ರಾಚಾರ್ಯ ಪುರೋಹಿತ, ವೆಂಕಟರಾವ ಮಾಸ್ಟರ್, ಚಂದು ಮಹಾರಾಜ, ರಾಧಾಬಾಯಿ ಗುರ್ಜಲ್, ಸ್ವರೂಪಾ ದೇಶಪಾಂಡೆ, ಪಂಕಜಾ ಕುಲಕರ್ಣಿ, ಪ್ರಬಾವತಿ ಕಡಿವಾಳ, ದೀಪಾ ದೇಶಪಾಂಡೆ, ವೈಜಯಂತಿ ದೇಶಪಾಂಡೆ, ಚಂದನಾ ಕುಲಕರ್ಣಿ, ಪೂರ್ಣಿಮಾ ಪೂಜಾರಿ ಸೇರಿ ಭಕ್ತಾದಿಗಳು ಪಾಲ್ಗೊಂಡಿದ್ದರು.