ಮಳಖೇಡ ಐವರು ಪೊಲೀಸರಿಗೆ ಸೋಂಕು

2107 MLK 01
Published on

ಮಳಖೇಡ: ಪೊಲೀಸ್ ಠಾಣೆಯ ಐವರು ಸಿಬ್ಬಂದಿಗೆ ಮಂಗಳವಾರ ಕರೊನಾ ಪಾಸಿಟಿವ್ ದೃಢಪಟ್ಟಿದ್ದು, ಉಳಿದ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
14 ರಂದು ಈ ಐವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಅವರನ್ನು ಕಲಬುರಗಿಯ ಬುದ್ಧ ವಿಹಾರದಲ್ಲಿರುವ ಪೊಲೀಸ್ ಎಸ್ಐಸಿಗೆ ಶಿಫ್ಟ್ ಮಾಡಲಾಗಿದೆ. ಅಲ್ಲದೇ ತಮ್ಮ ಪಿಎಚ್ಸಿ ವ್ಯಾಪ್ತಿಯಲ್ಲಿ ಒಟ್ಟು 12 ಪಾಸಿಟಿವ್ ಪ್ರಕರಣ ಬಂದಿದ್ದು, ರಾಜಶ್ರೀ ಸಿಮೆಂಟ್ ಕಂಪನಿಯಲ್ಲಿ 2, ಅರೆಬೊಮ್ಮನಹಳ್ಳಿ 3, ಮಳಖೇಡ ಗ್ರಾಮ ಹಾಗೂ ತೆಲ್ಕೂರದಲ್ಲಿ ತಲಾ ಒಂದೊಂದು ಕೇಸ್ ಬಂದಿವೆ. ಅವರನ್ನು ಕಲಬುರಗಿಯ ಸ್ಲಂಬೋರ್ಡಗೆ ಶಿಫ್ಟ್ ಮಾಡಲಾಗಿದೆ ಎಂದು ಯಡಗಾ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸಂಜೀವ ಪಾಟೀಲ್ ತಿಳಿಸಿದ್ದಾರೆ.
ಠಾಣೆಯಲ್ಲಿ ಐವರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪಿಎಸ್ಐ ಶಿವಶಂಕರ ಸಾಹು ಠಾಣೆ ಸಂಪೂರ್ಣವಾಗಿ ಸ್ಯಾನಿಟೈಸರ್ ಮಾಡಿಸಿ, ಒಂದು ದಿನದ ಮಟ್ಟಿಗೆ ಠಾಣೆ ಮುಚ್ಚುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net