

ಅರಕಲಗೂಡು: ಬಹುದೊಡ್ಡ ಸಂವಿಧಾನ ರಚಿಸಿ ದೇಶದ ಸಾರ್ವಭೌಮತೆ ಎತ್ತಿಹಿಡಿದ ಡಾ.ಬಿ.ಆರ್.ಅಂಬೇಡ್ಕರ್ ಜೀವಮಾನದ ಸಾಧನೆಗಳು ಎಲ್ಲರಿಗೂ ಸ್ಫೂರ್ತಿದಾಯಕ ಎಂದು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ರಂಗಸ್ವಾಮಿ ಹೇಳಿದರು.
ತಾಲೂಕಿನ ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಡಾ.ಅಂಬೇಡ್ಕರ್ ಅವರ 66ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಗೌರವ ನಮನ ಸಲ್ಲಿಸಿ ಮಾತನಾಡಿ, ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸ್ಪಶ್ಯತೆ, ಅಸಮಾನತೆ ವಿರುದ್ಧ ಧ್ವನಿ ಎತ್ತಿ ತುಳಿತಕ್ಕೆ ಒಳಗಾದ ಕೆಳ ವರ್ಗದ ಜನರಿಗೆ ಸಮಾನ ಹಕ್ಕು ದೊರಕಿಸಿದ ಅಂಬೇಡ್ಕರ್ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಸಮಾನತೆಯ ಹರಿಕಾರ. ಇವರ ಆದರ್ಶ ಸದಾ ಸ್ಮರಣೀಯ ಎಂದರು.
ತಾಲೂಕು ಗ್ರಾಪಂ ನೌಕರರ ಒಕ್ಕೂಟದ ಅಧ್ಯಕ್ಷ ಧರ್ಮಯ್ಯ, ಗ್ರಾಪಂ ಸದಸ್ಯ ಪ್ರಕಾಶ್, ಪಿಡಿಒ ಅರುಣಕುಮಾರ್, ಕಾರ್ಯದರ್ಶಿ ಕೃಷ್ಣೇಗೌಡ, ಹರೀಶ್, ಸುಬ್ರಹ್ಮಣ್ಯ, ಸಿಬ್ಬಂದಿ ಇದ್ದರು.