ಮಲ್ಲಿಪಟ್ಟಣ ಹೋಬಳಿಯಲ್ಲಿ ಶುಕ್ರವಾರ ಬೆಳೆ ಜಮೀನಿನಲ್ಲಿ ಹಿಂಡು ಹಿಂಡಾಗಿ ಅಡ್ಡಾಡುತ್ತಿರುವ ಕಾಡಾನೆಗಳು.

ಮಲ್ಲಿಪಟ್ಟಣ ಹೋಬಳಿಯಲ್ಲಿ ಶುಕ್ರವಾರ ಬೆಳೆ ಜಮೀನಿನಲ್ಲಿ ಹಿಂಡು ಹಿಂಡಾಗಿ ಅಡ್ಡಾಡುತ್ತಿರುವ ಕಾಡಾನೆಗಳು.
Published on

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಭಾಗದಲ್ಲಿ ಶುಕ್ರವಾರ ಕಾಡಾನೆಗಳು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದವು.


ಕೊಡಗು ಭಾಗದ ಬೈಸೂರು ಅರಣ್ಯ ಪ್ರದೇಶದಿಂದ ಗುರುವಾರ ರಾತ್ರಿ ಆಲದಹಳ್ಳಿ ಮಾರ್ಗವಾಗಿ ಮಲ್ಲಿಪಟ್ಟಣ ಹೋಬಳಿಗೆ ಲಗ್ಗೆ ಇಟ್ಟಿರುವ ಐದು ಕಾಡಾನೆಗಳು ಮುಸವತ್ತೂರು ಭಾಗದಲ್ಲಿ ರಾತ್ರಿಯಿಡಿ ಬೆಳೆ ಜಮೀನು ಮೇಲೆ ದಾಳಿ ನಡೆಸಿವೆ.


ಶುಕ್ರವಾರ ಬೆಳಗ್ಗೆ ಮುಸವತ್ತೂರು ಬಳಿ ಕಾಣಿಸಿಕೊಂಡ ಕಾಡಾನೆಗಳು ಕೊಳ್ಳಂಗಿ, ಕಲ್ಲೂರು, ಚೌರಗಲ್ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅಡ್ಡಾಡಿ ಭತ್ತ, ಅಡಿಕೆ, ಜೋಳದ ಬೆಳೆ ತುಳಿದು ದಾಂದಲೆ ನಡೆಸಿವೆ. ಬೆಳೆ ಜಮೀನು ತುಳಿಯುತ್ತಿದ್ದ ಆನೆಗಳನ್ನು ಓಡಿಸಲು ಕಿರುಚಾಟ ನಡೆಸಿದರು. ಇದರಿಂದ ಬೆದರಿದ ಆನೆಗಳು ದಿಕ್ಕೆಟ್ಟು ಸುತ್ತಲಾರಂಭಿಸಿದವು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆನೆಗಳನ್ನು ಕಾಡಿಗಟ್ಟಲು ಹರಸಾಹಸ ನಡೆಸಿದರು.


ಕಾಡಾನೆ ದಾಳಿಯಿಂದ ಬೆಳೆದಿದ್ದ ಬೆಳೆಗಳು ಹಾನಿಗೀಡಾಗಿದ್ದು ಜೀವ ಭಯ ಹುಟ್ಟಿಸಿದೆ. ಸರ್ಕಾರ ಕಾಡಾನೆಗಳಿಗೆ ಕಡಿವಾಣ ಹಾಕುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.


ಅರಣ್ಯ ಇಲಾಖೆ ಸಂರಕ್ಷಣಾಧಿಕಾರಿ ಶಂಕರ್ ಮಾತನಾಡಿ, ಮಲ್ಲಿಪಟ್ಟಣ ಹೋಬಳಿಯ ಹಲವೆಡೆ ಪ್ರತ್ಯಕ್ಷವಾಗಿರುವ ಐದು ಕಾಡಾನೆಗಳು ಬೆಳೆ ಜಮೀನಿನ ಮೇಲೆ ಸುತ್ತಾಡುತ್ತಿವೆ. ಕಾಡನೆಗಳನ್ನು ಕೊಡಗಿನ ಕಟ್ಟೇಪುರ ಅರಣ್ಯ ಪ್ರದೇಶಕ್ಕೆ ಓಡಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net