ಮಲ್ಲಿನಾಥ ಗೌಡೆಗೆ ಭಾವಪೂರ್ಣ ವಿದಾಯ

Capture2
Published on

ಬಸವಕಲ್ಯಾಣ: ಮಹಾರಾಷ್ಟ್ರದ ಸೊಲ್ಲಾಪುರ ಬಳಿ ಭಾನುವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಐಎಸ್ಎಫ್ ಎಎಸ್ಐ ಮಲ್ಲಿನಾಥ ಗೌಡೆ ಮೃತಪಟ್ಟಿದ್ದು, ಪತ್ನಿ ಮತ್ತು ಐವರು ಪುತ್ರಿಯರನ್ನು ಅಗಲಿದ್ದಾರೆ.

ಮನ್ನಳ್ಳಿ ಗ್ರಾಮದ ಮಲ್ಲಿನಾಥ ಗೌಡೆ(56) ಸೊಲ್ಲಾಪುರದಲ್ಲಿ ಕರ್ತವ್ಯದಲ್ಲಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟಿದ್ದು, ಸೋಮವಾರ ಸಂಜೆ ಸ್ವಗ್ರಾಮದಲ್ಲಿ ಸಕರ್ಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಜರುಗಿತು. ಸಿಐಎಸ್ಎಫ್ ಅಧಿಕಾರಿಗಳ ತಂಡ ಅಂತಿಮ ಗೌರವ ಸಲ್ಲಿಸಿತು.

ಪಾಥರ್ಿವ ಶರೀರ ಸೋಮವಾರ ಸಂಜೆ ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬ ಮತ್ತು ಸಂಬಂಧಿಕರ ಆಕ್ರಂದನ ಮನಕಲುಕುವಂತಿತ್ತು. ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತು. ಮನೆ ಬಳಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಶಾಸಕ ಶರಣು ಸಲಗರ, ಕಾಂಗ್ರೆಸ್ ನಾಯಕಿ ಮಾಲಾ ಬಿ.ನಾರಾಯಣರಾವ, ಸಿಪಿಐ ವಿಜಯಕುಮಾರ ನಾಯಕ ಹಾಗೂ ಪಿಎಸ್ಐ ವಸೀಮ್ ಪಟೇಲ್ ಇತರರು ಅಂತಿಮ ನಮನ ಸಲ್ಲಿಸಿದರು. ನಂತರ ಅಂಲಕೃತ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಅವರ ಹೊಲದಲ್ಲಿ ಅಂತ್ಯಸಂಸ್ಕಾರ ನಡೆಯಿತು. ಭಾರತ ಮಾತಾಕಿ ಜೈ, ಮಲ್ಲಪ್ಪ ಗೌಡೆ ಅಮರ ರಹೆ ಘೋಷಣೆಗಳು ಮೊಳಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net