

ಯಳಂದೂರು: ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟಕ್ಕೆ ಯಳಂದೂರು ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಎಂ.ಎಂ. ಪ್ರಭುಸ್ವಾಮಿ ಚುನಾಯಿತರಾಗಿದ್ದಾರೆ.
ಗುರುವಾರ ನಡೆದ ಮತದಾನದಲ್ಲಿ ಈ ಕ್ಷೇತ್ರಕ್ಕೆ ಎಂ.ಎಂ. ಪ್ರಭುಸ್ವಾಮಿ ಹಾಗೂ ಅಂಬಳೆ ಶಿವನಾಂದಸ್ವಾಮಿ ಪ್ರತಿಸ್ಪರ್ಧಿಗಳಾಗಿದ್ದರು. ಒಟ್ಟು ಹತ್ತು ಮತಗಳು ಇದರಲ್ಲಿದ್ದವು. ಇದರಲ್ಲಿ 6 ಮತಗಳನ್ನು ಪಡೆದ ಎಂ.ಎಂ. ಪ್ರಭುಸ್ವಾಮಿ ಆಯ್ಕೆಯಾದರು. ಇವರನ್ನು ಸ್ವಗ್ರಾಮವಾದ ತಾಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು 2 ನೇ ಬಾರಿ ಒಕ್ಕೂಟಕ್ಕೆ ಸ್ಪರ್ಧಿಸಿ ಗೆದ್ದಿದ್ದೇನೆ. ಈ ಗೆಲುವಿಗೆ ಕಾರಣಕರ್ತರಾದ ಎಲ್ಲರನ್ನೂ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಒಕ್ಕೂಟದಲ್ಲಿ ಇರುವ ಸವಲತ್ತುಗಳನ್ನು ಕೊಡಿಸಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ. ಅಲ್ಲದೆ ಹೈನುಗಾರರ ಸಮಸ್ಯೆಗಳಿಗೆ ಸ್ಪಂದಿಸುವೆ ಎಂದರು.
ಮುಖಂಡರಾದ ನಿರಂಜನ್, ಪುಟ್ಟಣ್ಣ, ಗಿರೀಶ್, ಸುರೇಶ್, ರವಿ, ಮಹೇಶ್‌ಕುಮಾರ್ ಸೇರಿದಂತೆ ಇತರರು ಇದ್ದರು.