ಮಲ್ಲಿಕಾರ್ಜುನಸ್ವಾಮಿ ಹುಂಡಿಯಲ್ಲಿ 3.92 ಲಕ್ಷ ರೂ. ಸಂಗ್ರಹ

29hbd1
Published on

ಹಳೇಬೀಡು: ಪುಷ್ಪಗಿರಿ ಮಲ್ಲಿಕಾರ್ಜುನಸ್ವಾಮಿ ಹಾಗೂ ಹಳೇಬೀಡು ಹೊಯ್ಸಳೇಶ್ವರ ದೇಗುಲದ ಹುಂಡಿ ಹಣವನ್ನು ಶುಕ್ರವಾರ ಎಣಿಕೆ ಮಾಡಲಾಯಿತು. ಕ್ರಮವಾಗಿ 3.92 ಲಕ್ಷ ರೂ. ಹಾಗೂ 1.95 ಲಕ್ಷ ರೂ. ಆದಾಯ ಬಂದಿದೆ.


ಹಳೇಬೀಡು ನಾಡಕಚೇರಿ ಉಪ ತಹಸೀಲ್ದಾರ್ ಭೋಜೇಂದ್ರಪ್ಪ ನೇತೃತ್ವದಲ್ಲಿ ಸಿಬ್ಬಂದಿ ಹುಂಡಿಯನ್ನು ತೆರೆದು ಅರ್ಚಕರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಹಣವನ್ನು ಎಣಿಕೆ ಮಾಡಿದರು. ಆರು ತಿಂಗಳ ಅವಧಿಗೆ ಪುಷ್ಪಗಿರಿ ಮಲ್ಲಿಕಾರ್ಜುನ ದೇಗುಲದಲ್ಲಿ 3.92 ಲಕ್ಷ ರೂ. ಸಂಗ್ರಹವಾಗಿದೆ. ಬೆಳಗ್ಗೆ 11 ರಿಂದ ಆರಂಭವಾದ ಎಣಿಕೆ ಕಾರ್ಯ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಯಿತು.


ಹಳೇಬೀಡು ಹೊಯ್ಸಳೇಶ್ವರ ದೇಗುಲದ ಹುಂಡಿಯಲ್ಲಿ 1.95 ಲಕ್ಷ ರೂ. ಹಣ ಸಂಗ್ರಹವಾಗಿದೆ. ಇದಲ್ಲದೆ ಭಕ್ತರ ಬೇಡಿಕೆಯನ್ನು ಒಳಗೊಂಡಿದ್ದ ನಾಲ್ಕು ಚೀಟಿಗಳು ದೊರಕಿದ್ದು, ಮೂರರಲ್ಲಿ ತಮ್ಮ ಕುಟುಂಬದ ಒಳಿತಿಗಾಗಿ ಪ್ರಾರ್ಥಸಿದ್ದರೆ, ಮತ್ತೊಂದು ಚೀಟಿಯಲ್ಲಿ ತಾನು ಪ್ರೀತಿಸುತ್ತಿರುವ ಹುಡುಗಿಯನ್ನೇ ವಿವಾಹ ಮಾಡಿಕೊಳ್ಳಲು ಅನುಗ್ರಹ ಮಾಡುವಂತೆ ಕೋರಲಾಗಿದೆ.


ರಾಜಸ್ವ ನಿರೀಕ್ಷಕ ಲೀಲಾನಂದ, ಹಳೇಬೀಡು ಗ್ರಾಮ ಲೆಕ್ಕಾಧಿಕಾರಿ ಭರತ್, ನಾಡಕಚೇರಿ ಸಿಬ್ಬಂದಿ ಹಾಗೂ ಗ್ರಾಮ ಸಹಾಯಕರು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net