

ಕಲಬುರಗಿ: ವಿಹಾರವನ್ನು ನಿರ್ಮಿಸಿದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ರಾಜಕೀಯ, ಶಿಕ್ಷಣ, ಧರ್ಮ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ದೇಶದ ಪ್ರಧಾನಿಯಾಗಲಿ ಎಂದು ಮಹಾರಾಷ್ಟçದ ಬೌದ್ಧ ಬಿಕ್ಕು ಭಂತೆ ಉಪಗುಪ್ತ ಮಹಾಥೇರೋ ಎಂದು ಅಖಿಲ ಭಾರತೀಯ ಬಿಕ್ಕು ಸಂಘದ ಅಧ್ಯಕ್ಷ ಉಪಗುಪ್ತ ಮಹಾಥೇರೋ ಆಶಯ ವ್ಯಕ್ತಪಡಿಸಿದರು.
ನಗರದ ಹೊರವಲಯದ ಸಿದ್ಧಾರ್ಥ ವಿಹಾರ ಟ್ರಸ್ಟ್ನ ಬುದ್ಧ ವಿಹಾರದಲ್ಲಿ ಶನಿವಾರ ಏರ್ಪಡಿಸಿದ್ದ ಇಂಡೋನೇಷಿಯಾದಿAದ ತಂದ ಬುದ್ಧ ಮೂರ್ತಿಯ ಅನಾವರಣ ಸಮಾರಂಭದಲ್ಲಿ ಮಾತನಾಡಿ, ದೀನ ದಲಿತರ, ಶೋಷಿತರ ಏಳಿಗೆಗೆ ಶ್ರಮಿಸುತ್ತಿರುವ ಖರ್ಗೆ ಅವರಂಥ ನಾಯಕ ಪ್ರಧಾನಿಯಾದರೆ ದಮನಿತ ವರ್ಗಕ್ಕೆ ಬಹುದೊಡ್ಡ ಧ್ವನಿ ಸಿಕ್ಕಂತೆ ಆಗುತ್ತದೆ. ಅದಕ್ಕೆ ಎಲ್ಲ ಭಿಕ್ಕುಗಳು ಪ್ರಾರ್ಥಿಸುತ್ತೇವೆ ಎಂದು ಹೇಳಿದರು.
ಮಹಾರಾಷ್ಟçದ ದಲಿತ ಮುಖಂಡ ಸಿದ್ಧಾರ್ಥ ಹಾತಿಂಬರೆ ಮಾತನಾಡಿ, ಬುದ್ಧ ತತ್ವಗಳನ್ನು ಎಲ್ಲೆಡೆ ಹರಡಲು ವಿಹಾರಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ವಿಹಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಜನ ಆಗಮಿಸಿ, ತತ್ವಗಳನ್ನು ಅರಿಯಬೇಕು. ಅದನ್ನು ಆಚರಣೆಯಲ್ಲಿ ತರಬೇಕು. ಅಂಬೇಡ್ಕರ್ ಅವರು ಕಂಡ ಬುದ್ಧ ಭಾರತದ ಕನಸನ್ನು ಇಂದು ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಬುದ್ಧ ವಿಹಾರದ ಮೂಲಕ ಸಾಕಾರಗೊಳಿಸಿದ್ದಾರೆ ಎಂದರು.
ಥೈಲ್ಯಾAಡ್‌ನ ಬೌದ್ಧ ಬಿಕ್ಕು ಥಿಮ್ ಕ್ವಾಂಡ್ ನೇತೃತ್ವದಲ್ಲಿ ಬುದ್ಧ ವಂದನೆ ಮತ್ತು ಬುದ್ಧ ಮೂರ್ತಿ ಅನಾವರಣ ಮಾಡಲಾಯಿತು. ಮಹಾರಾಷ್ಟç, ತ್ರಿಪುರಾ, ಬಿಹಾರ ದೇಶದ ವಿವಿಧೆಡೆಯ ಬಿಕ್ಕುಗಳ ಸಾನ್ನಿಧ್ಯ ವಹಿಸಿದ್ದರು. ಇಂಡೋನೆಷಿಯಾದ ಯೆನಿಲಿಮ್, ಮೆಲಿಗನ್ ಚಂದ್ರಾ, ಎಲಿಯಾ ಡೇರಾ ಸೇರಿ ೧೫ಕ್ಕೂ ಹೆಚ್ಚು ಬೌದ್ಧ ಪ್ರತಿನಿಧಿಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು.
ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ, ಡಾ.ಪರಾ ಅಲನ್ ವಿಚನ್, ಜರ್ಮನಿಯ ಮೈಕಲ್, ಸಿದ್ಧಾರ್ಥ ವಿಹಾರ ಟ್ರಸ್ಟ್ ಅಧ್ಯಕ್ಷ ರಾಹುಲ್ ಖರ್ಗೆ, ರಾಧಾಬಾಯಿ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಮುಖರಾದ ಶಿವಾನಂದ ಪಾಟೀಲ್ ಮರತೂರ, ಶರಣಬಸವಪ್ಪ ಕಾಮರೆಡ್ಡಿ, ನೀಲಕಂಠರಾವ ಮೂಲಗೆ, ಜಗದೇವ ಗುತ್ತೇದಾರ್, ಸಿದ್ಧಾರ್ಥ ಬುದ್ಧ ವಿಹಾರ ಟ್ರಸ್ಟ್ನ ರಮೇಶ ಬೇಗಾರ, ಭೀಮರಾವ ಟಿ.ಟಿ., ಮಹಾಂತಪ್ಪ ಸಂಗಾವಿ ಇತರರಿದ್ದರು. ಈಶ್ವರ ಇಂಗಿನ್ ಸ್ವಾಗತಿಸಿದರು. ಡಾ.ಚಂದ್ರಶೇಖರ ದೊಡ್ಡಮನಿ ವಂದಿಸಿದರು.