ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ

SHIGGAVI ETA NIRAVARI
Published on

ಕಲಬುರಗಿ: ಯಡ್ರಾಮಿ ಹಾಗೂ ಜೇವರ್ಗಿ ತಾಲೂಕಿನ ವ್ಯಾಪ್ತಿಯ ಮಲ್ಲಾಬಾದ್ ಏತ ನೀರಾವರಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಆರಂಭಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತಗೌಡ ನಂದಿಹಳ್ಳಿ ಎಚ್ಚರಿಕೆ ನೀಡಿದರು.
೧೦ ವರ್ಷದಿಂದ ಮಲ್ಲಾಬಾದ್ ಏತ ನೀರಾವರಿ ಯೋಜನೆ ಕಾಮಗಾರಿಗೆ ಮುಕ್ತಿ ಸಿಕ್ಕಿಲ್ಲ. ಕ್ಷೇತ್ರದ ಶಾಸಕರು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ೧೩೨ ಕೋಟಿ ರೂ. ವೆಚ್ಚದ ಎಂಬಿಸಿ ಶಾಖಾ ಕಾಲುವೆ ಕಾಮಗಾರಿಗೆ ೨೦೨೩ರಲ್ಲಿ ಅನುಮೋದನೆ ನೀಡಿದ್ದು, ಇದುವರೆಗೆ ಕಾಮಗಾರಿ ಟೆಂಡರ್ ಕರೆದಿಲ್ಲ. ಇದರಿಂದ ೫೮ ಹಳ್ಳಿಗೆ ನೀರು ದೊರೆಯುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯಡ್ರಾಮಿ ತಾಲೂಕಿನ ೩೮ ಗ್ರಾಮ, ಜೇವರ್ಗಿ ತಾಲೂಕಿನ ೨೦ ಗ್ರಾಮಗಳು ಈ ಯೋಜನೆ ಇದ್ದು, ಎಂಬಿಸಿ ವಿಭಾಗದ ರೈತರಿಗೆ ನಾಲ್ಕು ಟಿಎಂಸಿ, ಜೆಬಿಸಿ ವಿಭಾಗದ ರೈತರಿಗೆ ೨.೫ಟಿಎಂಸಿ ನೀರು ದೊರೆಯಲಿದೆ. ಯೋಜನೆ ಜಾರಿ ಹೋರಾಟ ಕುರಿತು ಯಡ್ರಾಮಿ ತಾಲೂಕಿನ ಬಿಳವಾರದಲ್ಲಿ ರೈತರ ಸಭೆ ನಡೆಯಲಿದ್ದು, ೫೦ ಹಳ್ಳಿಗಳ ರೈತರು ಪಾಲ್ಗೊಂಡು ಮುಂದಿನ ಹೋರಾಟದ ರೂಪರೇಷೆ ಸಿದ್ಧತೆ ಮಾಡಲಿz್ದೆÃವೆ ಎಂದರು.
ಮಹಿಳಾ ಘಟಕದ ಸುಶೀಲಾಬಾಯಿ, ಸಂಘಟನೆ ಜಿಲ್ಲಾ ಕಾರ್ಯಾಧ್ಯಕ್ಷ ಸಂತೋಷಗೌಡ ಮಾಲಿಪಾಟೀಲ್, ಭೀಮಾಶಂಕರ ಕಟ್ಟಿಮನಿ, ಗುರಣ್ಣಗೌಡ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net