ಮಲ್ಲಾಬಾದ ಬಳಿ ಡಿಸೆಲ್ ಟ್ಯಾಂಕರ್ ಪಲ್ಟಿ ಹೊಡೆದು ಸ್ಪೋಟ : ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

Chemical tanker blast
Published on

ಹಂದಿ ರಕ್ಷಿಸಲು ಯತ್ನಿಸಿದಾಗ ನಡೆದ ಘಟನೆ

ಕಲಬುರಗಿ : ರಸ್ತೆಯಲ್ಲಿ ಅಡ್ಡ ಬಂದ ಹಂದಿ ರಕ್ಷಿಸಲು ಹೋಗಿ ಡಿಸೇಲ್ ಟ್ಯಾಂಕರ್ ಪಲ್ಟಿ ಹೊಡೆದು ಘಟನೆ ಅಫಜಲಪುರ ತಾಲೂಕಿನ ಮಲ್ಲಾಬಾದ್ ಗ್ರಾಮದ ಬಳಿ ನಡೆದಿದೆ.

ಪಲ್ಟಿಯಾದ ಕೆಲ ಹೊತ್ತಿನಲ್ಲಿ ಟ್ಯಾಂಕರ್ ಸ್ಪೋಟಗೊಂಡು ಬೆಂಕಿ ಕಾಣಿಸಿಕೊಂಡಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಮುಂಬಯಿನಿಂದ ತೆಲಂಗಾಣದ‌ ಕರ್ನೂಲ್‌ ಜಿಲ್ಲೆಗೆ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಹಂದಿ ರಕ್ಷಿಸಲು ಚಾಲಕ ಯತ್ನಿಸಿದ್ದಾನೆ. ಆಗ ಟ್ಯಾಂಕರ್ ರಸ್ತೆ ಪಕ್ಕ ಸರಿದು ತಗ್ಗಿನಲ್ಲಿ ಪಲ್ಟಿಯಾಗಿದೆ. ಬೆನ್ನಲ್ಲಿಯೇ ಟ್ಯಾಂಕರ್ ಸ್ಪೋಟ ಗೊಂಡು ಬೆಂಕಿ ಹೊತ್ತಿತು ಎಂದು ಪೊಲೀಸರು ತಿಳಿಸಿದ್ದಾರೆ.

ಟ್ಯಾಂಕರ್ ದಲ್ಲಿ ಅಂದಾಜು 40 ಸಾವಿರ ಡಿಸೆಲ್ ಇತ್ತು. ಮಾಹಿತಿ ಅರಿಯುತ್ತಲೇ ಅಫಜಲಪುರ ಮತ್ತು ಕಲಬುರಗಿಯಿಂದ ಮೂರು ಅಗ್ನಿಶಾಮಕದಳ ವಾಹನಗಳು ದೌಡಾಯಿಸಿ ಬೆಂಕಿ‌ ನಂದಿಸುವ ಕಾರ್ಯವನ್ನು ಸಿಬ್ಬಂದಿ ಮಾಡಿದರು. ಸಿಪಿಐ ಪಂಡಿತ ಸಗರ ಮತ್ತು ಸಿಬ್ಬಂದಿ ಭೇಟಿ ನೀಡಿದರು.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net