ಮಲ್ಲಾಡಿಹಳ್ಳಿ ಬಿಪಿಇಡಿ ಕಾಲೇಜಿಗೆ ಐದು ರ‌್ಯಾಂಕ್‌ಗಳ ಗರಿ

CTD RANK....
Published on

ಚಿತ್ರದುರ್ಗ: ಹೊಳಲ್ಕೆರೆ ತಾಲೂಕು ಮಲ್ಲಾಡಿಹಳ್ಳಿ ಅನಾಥಸೇವಾಶ್ರಮದ ದೈಹಿಕ ಶಿಕ್ಷಣ ಮಹಾವಿದ್ಯಾಲಯ ದ್ವಿತೀಯ ಹಾಗೂ ಅಂತಿಮ ಸೆಮಿಸ್ಟ ರ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದಿದೆ. ಅಂತಿಮ ಸೆಮಿಸ್ಟರ್‌ನಲ್ಲಿ ಎಸ್.ಪಿ. ಶಿವರಾಜ್(8.43 ಅಂಕ)ಪ್ರಥಮ ರ‌್ಯಾಂಕ್‌ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ.

ಸಿ.ಆರ್. ನವೀನ್(8.38)ದ್ವಿತೀಯ ರ‌್ಯಾಂಕ್, ಎಲ್. ಮಂಜುನಾಥ (8.32)4ನೇ ರ‌್ಯಾಂಕ್, ಉಸ್ಮಾನ್ ಖಾನ್(7.82)9ನೇ ರ‌್ಯಾಂಕ್ ಹಾಗೂ ನವೀನ್‌ಕುಮಾರ್(7.80)10ನೇ ರ‌್ಯಾಂಕ್ ಪಡೆದು ಕಾಲೇಜಿಗೆ ಹಾಗೂ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ಕಾಲೇಜಿನ ಉತ್ತಮ ಫಲಿ ತಾಂಶಕ್ಕಾಗಿ ಸಂಸ್ಥೆ ಉಪಾಧ್ಯಕ್ಷ ರಾಘವೇಂದ್ರ ಪಾಟೀಲ, ಕಾರ್ಯದರ್ಶಿ ಎಸ್.ಕೆ. ಬಸವರಾಜನ್, ಖಜಾಂಚಿ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಎಲ್ಲ ವಿಶ್ವಸ್ತರು ಮತ್ತು ಆಡಳಿತಾಧಿಕಾರಿ ಡಾ.ಜಿ .ಪಾಂಡುರಂಗಮೂರ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net