

ದೋರನಹಳ್ಳಿ: ಏಳ್ ಕೋಟಿ ಏಳ್ ಕೋಟ್ ಮೈಲಾರಲಿಂಗ ಎನ್ನುತ್ತಲೇ ಕಬ್ಬಿಣದ ಸರಪಳಿ ಬರಿಗೈಯಿಂದಲೇ ತುಂಡರಿಸುತ್ತಿದ್ದAತೆ ನೆರೆದಿದ್ದ ಸಾವಿರಾರು ಭಕ್ತರು ಭಂಡಾರ ಎರಚಿ ಸರಪಳಿ ಉತ್ಸವ ಸಂಭ್ರಮಿಸಿದರು.
ಗ್ರಾಮದ ಸಿಬಾರ ಕಟ್ಟಿ ಬಳಿ ಶ್ರೀ ಮಲ್ಲಯ್ಯ ಮುತ್ಯಾನ ಸರಪಳಿ ಕಂಬದ ಬಳಿ ಪದ್ಧತಿಯಂತೆ ಭಾನುವಾರ ದಸರಾ ಉತ್ಸವ ನಿಮಿತ್ತ ಸರಪಳಿ ಹರಿಯುವ ಉತ್ಸವ ಅದ್ದೂರಿಯಾಗಿ ಜರುಗಿತು.
ವಾಡಿಕೆಯಂತೆ ಗ್ರಾಮದ ಮಾಲಿಗೌಡರ ಮನೆಯಿಂದ ಮಲ್ಲಯ್ಯನ ಉತ್ಸವ ಮೂರ್ತಿ ಪಲ್ಲಕ್ಕಿಯಲ್ಲಿ ವಿರಾಜಮಾನವಾಗಿ ಕೂರಿಸಿ ವಿವಿಧ ಹೂಗಳಿಂದ ಅಲಂಕೃತವಾದ ಪಲ್ಲಕ್ಕಿ ಗ್ರಾಮದ ವಗ್ಗರಾಯಪ್ಪನ ಗುಡಿಗೆ ಶನಿವಾರ ಸಂಜೆ ತೆರಳಿ ಅಲ್ಲಿ ಪೂಜೆಗೊಂಡು ನಂತರ ಅಲ್ಲಿಂದ ಹೊರಟು ಗ್ರಾಮದ ಸಿಬಾರ ಕಟ್ಟಿಗೆ ಭಾನುವಾರ ಬೆಳಗಿನ ಜಾವ ಬಂದು ವಿರಾಜಮಾನನಾಗುತ್ತಾನೆ.
ತದನಂತರ ಗ್ರಾಮದ ಜಿಪಂನ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿನೋದಗೌಡ ಮಾಲಿ ಪಾಟೀಲ್ ಹಾಗೂ ವಿರಾಜಗೌಡ ಮಾಲಿಪಾಟೀಲ್ ಅವರ ಅಪ್ಪಣೆಯಂತೆ ಭಾಜಾ ಭಜಂತ್ರಿಯೊAದಿಗೆ ಮೆರವಣಿಗೆ ಮೂಲಕ ಕರೆತರಲಾಗುತ್ತದೆ. ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಸಂಗಣ್ಣ ದೇಸಾಯಿ ಅವರು ಕುಲಕರ್ಣಿ ಅವರ ತಂಡದೊAದಿಗೆ ಸಿಬಾರ ಕಟ್ಟೆಗೆ ಆಗಮಿಸಿದ ಮಾಲಿಗೌಡರು ಚಿಕ್ಕಮಠದ ಶಿವಲಿಂಗರಾಜೇAದ್ರ ಶಿವಾಚಾರ್ಯರು ಮತ್ತು ಹಿರೇಮಠದ ಮಡಿವಾಳ ದೇವರ ಸಾನ್ನಿಧ್ಯದಲ್ಲಿ ಮಾಲಿಗೌಡರ ಅಪ್ಪಣೆ ಮೇರೆಗೆ ಸರಪಳಿ ಉತ್ಸವಕ್ಕೆ ಸೂಚಿಸಲಾಯಿತು.
ಹಾಲು, ತುಪ್ಪ, ಭಂಡಾರದಿAದ ಸರಪಳಿ ಕಂಬಕ್ಕೆ ಅಭಿಷೇಕ ಮಾಡಿ ಸಿಲಿಂಗಪ್ಪ ಪೂಜಾರಿ ಹಾಕಿದ ಕಬ್ಬಿಣದ ಸರಪಳಿಯನ್ನೂ ಡೋಳ್ಳು, ಹಲಗೆ, ಭಾಜಾ-ಭಜಂತ್ರಿ ನಾದಸ್ವರದೊಂದಿಗೆ ಹೆಜ್ಜೆ ಹಾಕುತ್ತ ಪಲ್ಲಕ್ಕಿಯಲ್ಲಿನ ಮಲ್ಲಯ್ಯನಿಗೆ ನಮಸ್ಕರಿಸಿ ಮೈ ಮೇಲೆ ಮಲ್ಲಯ್ಯನ ಆವಾಹನೆ ಮಾಡಿಕೊಂಡು ಹಿರೇ ಪೂಜಾರಿ ಜಟ್ಟೆಪ್ಪ ನೋಡ ನೋಡುತ್ತಿದ್ದಂತೆ ಸರಪಳಿಯನ್ನು ಹರಿದು ಕೂಗು ಹಾಕಿದರು.
ಅಲ್ಲಿಗೆ ಎಲ್ಲ ಭಕ್ತರು ಬಾಳೆಹಣ್ಣು, ಭಂಡಾರ ಎರಚಿ ಏಳ್ ಕೋಟಿ ಏಳ್ ಕೋಟ್ ಮೈಲಾರ ಎಂದು ಸಂಭ್ರಮಿಸಿದರು. ನಂತರ ಗ್ರಾಮದ ದೇವಸ್ಥಾನಗಳಲ್ಲಿ, ವೃತ್ತಗಳಲ್ಲಿ ಕೋಲಾಟ, ಜಾನಪದ ಗೀತೆ, ಡೊಳ್ಳು ಕುಣಿತ, ನಂದಿಕೋಲು ಮೆರವಣಿಗೆ ನಡೆಯಿತು.