ಮಲ್ಲಮ್ಮಳ ಪ್ರಾಧಿಕಾರ ರಚನೆ ಆಗಲಿ

2
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಬೆಳವಡಿ ಗ್ರಾಮಸ್ಥರು ಮನವಿ ಸಲ್ಲಿಸಿದರು. ಚಂದ್ರಶೇಖರಯ್ಯ ಕಾರೀಮನಿ, ಪ್ರಕಾಶ ಹುಂಬಿ, ಎನ್​.ಎಂ. ಕರೀಕಟ್ಟಿ, ಸವಿತಾ ಪಾಟೀಲ ಇತರರಿದ್ದರು.
Published on

ಬೆಲಹೊಂಗಲ: ವೀರರಾಣಿ ಬೆಳವಡಿ ಮಲ್ಲಮ್ಮಳ ಪ್ರಾಧಿಕಾರ ರಚನೆ ಶ್ರೀ ಮಾಡುವಂತೆ ಒತ್ತಾಯಿಸಿ ಮಲ್ಲಮ್ಮನ ಬೆಳವಡಿ ಗ್ರಾಮಸ್ಥರು ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಗ್ರಾಪಂ ಅಧ್ಯ ಚಂದ್ರಶೇಖರಯ್ಯ ಕಾರೀಮನಿ, ಮುಖಂಡ ಪ್ರಕಾಶ ಹುಂಬಿ ಮಾತನಾಡಿ, ಮಲ್ಲಮ್ಮಳ ಪ್ರಾಧಿಕಾರ ಶ್ರೀವಾಗಿ ರಚಿಸಬೇಕು. ಸರ್ಕಾರಕ್ಕೆ ಮನವಿ ಸಲ್ಲಿಸಿ ಅನೇಕ ಸಲ ಪ್ರತಿಭಟನೆ ಮಾಡಲಾಗಿದೆ. ಶಾಸಕರು ವಿಶೇಷ ಕಾಳಜಿವಹಿಸಿ ಪ್ರಾಧಿಕಾರ ರಚನೆಗೆ ಪ್ರಸ್ತಾವನೆ ಸಲಿಸ್ಲಿದ್ದು,
ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ. ಜು.18ರಂದು ಮಲ್ಲಮ್ಮಳ ವರ್ಧಂತಿ ಉತ್ಸವವಿದೆ. ಅದರೊಳಗಾಗಿ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.

ಶಾಸಕ ಮಹಾಂತೇಶ ಕೌಜಲಗಿ ಮನವಿ ಸ್ವೀಕರಿಸಿ ಮಾತನಾಡಿ, ಸರ್ಕಾರಕ್ಕೆ ಒತ್ತಡ ಹೇರಿ ಪ್ರಾಧಿಕಾರ ರಚನೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಎನ್​.ಎಂ. ಕರೀಕಟ್ಟಿ, ಪ್ರಕಾಶ ಕಾರೀಮನಿ, ಬಿ.ಜಿ.ದೇಗಾವಿ, ರಾಚಯ್ಯ ರೊಟ್ಟಯ್ಯನವರಮಠ, ಬಿ.ವಿ.ವಿರಕ್ತಮಠ, ವಿಶ್ವನಾಥ ಕರೀಕಟ್ಟಿ, ಸವಿತಾ ಪಾಟೀಲ, ಎ್​.ಎಸ್​.ಕಡಕೋಳ, ಡಾ.ದೇವೇಂದ್ರ ಗರಗದ, ಈರಣ್ಣ ತುರಾಯಿ, ಬಸು ನರೇಗಲ, ಶಂಕರ ಪರಮನಾಯ್ಕರ, ಪಿಂಟು ಗುಡ್ಡದಮಠ, ವಿಠ್ಠಲ ಪಿಸೆ, ಪ್ರಕಾಶ ಬಳಿಗಾರ, ಪ್ರಕಾಶ ಹುಂಬಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net