ಮಲ್ಲಮ್ಮ ಪಾಟೀಲ್ಗೆ ಉತ್ತಮ ಉಪನ್ಯಾಸಕಿ ಗರಿ

Capture1
Published on

ಭಾಲ್ಕಿ: ಉಪನ್ಯಾಸಕಿ ಮಲ್ಲಮ್ಮ ಆರ್.ಪಾಟೀಲ್ ಅವರಿಗೆ ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ದೊರಕಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ಶಿಕ್ಷಕರ ದಿನ ಸಂದರ್ಭದಲ್ಲಿ ಕೊಡಮಾಡುವ 2021-22ರ ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿಯನ್ನು ಸೋಮವಾರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರದಾನ ಮಾಡಲಿದ್ದಾರೆ.

ಮಲ್ಲಮ್ಮ ಪಾಟೀಲ್ ಹುಲಸೂರು ಎಸ್ಕೆಪಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕಿ ಆಗಿದ್ದಾರೆ. 32 ವರ್ಷಗಳಿಂದ ಶೈಕ್ಷಣಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಅವರು, ಗಡಿ ಭಾಗದ ವಿದ್ಯಾಥರ್ಿಗಳ ಫಲಿತಾಂಶ ಸುಧಾರಣೆಗೆ ಅವಿರತ ಪ್ರಯತ್ನ ಮಾಡುತ್ತಿದ್ದಾರೆ. ಉಪನ್ಯಾಸದಲ್ಲಿ ಪರಿಣಾಮಕಾರಿ ಕ್ರಮಗಳ ಅನುಸರಣೆ ಕಾರಣ ಇವರ ವಿಷಯದಲ್ಲಿ ಹಲವು ವಿದ್ಯಾಥರ್ಿಗಳು ಉತ್ತಮ ಅಂಕ ಪಡೆದಿದ್ದಾರೆ.

ಉಪನ್ಯಾಸಕ ವೃತ್ತಿ ಜತೆಗೆ ಸಾಹಿತ್ಯ, ಸಾಂಸ್ಕೃತಿಕ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ವಿವಿಧ ವಿಷಯಗಳ ಮೇಲೆ ಹಲವು ಲೇಖನಗಳನ್ನು ಬರೆದಿರುವ ಅವರು, ಶಿವಯೋಗಿ ಚನ್ನಬಸವ ಕಾದಂಬರಿ, ಶ್ರದ್ಧಾಂಜಲಿ ಕವನ ಸಂಕಲನ ಮತ್ತು ಹೇಮರಡ್ಡಿ ಮಲ್ಲಮ್ಮ ವಚನಗಳು ಪುಸ್ತಕ ಹೊರತಂದಿದ್ದಾರೆ. ಬಸವತತ್ವದ ಬಗ್ಗೆ ಆಳ ಅಧ್ಯಯನ ಮಾಡಿದ್ದಾರೆ. ರಾಜ್ಯ ಮಟ್ಟದ ಹಲವು ಸ್ಪಧರ್ೆ, ಕಾಯರ್ಾಗಾರ, ಕಮ್ಮಟಗಳಂಥ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಬಹುಮುಖ ಪ್ರತಿಭೆ ಇದೀಗ ಸಕರ್ಾರ ಪ್ರಕಟಿಸಿರುವ ಉತ್ತಮ ಉಪನ್ಯಾಸಕ 10 ಪ್ರಶಸ್ತಿಗಳಲ್ಲಿ ಮಲ್ಲಮ್ಮ ಸ್ಥಾನ ಪಡೆದಿರುವುದು ಅವರ ಪ್ರತಿಭೆಗೆ ಸಾಕ್ಷಿ. ಇವರ ಪುತ್ರ ಅಮರೇಶ್ವರ ಡೆಪ್ಯುಟಿ ಕಮಿಷನರ್ ಹುದ್ದೆಗೆ ನೇಮಕಗೊಂಡಿದ್ದು, ಸದ್ಯ ಕೇಂದ್ರ ಸಚಿವ ಭಗವಂತ ಖೂಬಾ ಆಪ್ತ ಕಾರ್ಯದಶರ್ಿಯಾಗಿದ್ದಾರೆ.

ಮಲ್ಲಮ್ಮ ಪಾಟೀಲ್ ಶ್ರೀಮಠದ ಪರಮಭಕ್ತೆ. ಉಪನ್ಯಾಸ ವೃತ್ತಿ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಕೊಡಿಸಿ ಉನ್ನತ ಅಧಿಕಾರಿಗಳನ್ನಾಗಿ ಮಾಡಿದ್ದಾರೆ. 32 ವರ್ಷಗಳಿಂದ ಶಿಕ್ಷಣ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಅವರು ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿಗೆ ಆಯ್ಕೆ ಆಗಿರುವುದು ಸಂತಸ ತಂದಿದೆ.
| ಶ್ರೀ ಗುರುಬಸವ ಪಟ್ಟದ್ದೇವರು, ಪೀಠಾಧಿಪತಿ, ಹಿರೇಮಠ ಸಂಸ್ಥಾನ ಭಾಲ್ಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net