ಮಲ್ಲಪ್ಪನಹಳ್ಳಿಯ ಹದಗೆಟ್ಟ ರಸ್ತೆಗೆ ಮಣ್ಣು ಸುರಿಸುವ ವಿಚಾರದಲ್ಲಿ ಸರಿಯಾಗಿ ಕಾಮಗಾರಿ ನಡೆಸುತ್ತಿಲ್ಲ.

ಮಲ್ಲಪ್ಪನಹಳ್ಳಿಯ ಹದಗೆಟ್ಟ ರಸ್ತೆಗೆ ಮಣ್ಣು ಸುರಿಸುವ ವಿಚಾರದಲ್ಲಿ ಸರಿಯಾಗಿ ಕಾಮಗಾರಿ ನಡೆಸುತ್ತಿಲ್ಲ.
Published on

ಹೊಳೆನರಸೀಪುರ: ಪಟ್ಟಣದ ಸಮೀಪದ ಮಲ್ಲಪ್ಪನಹಳ್ಳಿ ರಸ್ತೆಗೆ ಮಣ್ಣು ಸುರಿಯುವ ವಿಚಾರದಲ್ಲಿ ಹೇಮಾವತಿ ಬಲದಂಡೆ ಇಂಜಿನಿಯರ್ಗಳಾದ ಮನೋಜ್ ಮತ್ತು ವಿ ಆರ್ ಮಹೇಶ್ ಮೇಲೆ ದೂರು ದಾಖಲಾಗಿ ಎಫ್ಐಆರ್ ದಾಖಲಾಗಿದ್ದರು ಯಾವುದೇ ಕ್ರಮ ಕೈಗೊಳ್ಳದ ಬಗ್ಗೆ ತಾಲೂಕು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಚಿನ್ನಸ್ವಾಮಿ ಅವರು ತೀವ್ರವಾಗಿ ಖಂಡಿಸಿದರು.

ಪಟ್ಟಣದ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಸಂಚಾಲಕ ಚಿನ್ನಸ್ವಾಮಿ ಅವರು ಜನವರಿ ಮೂರರಂದು ಮಲ್ಲಪ್ಪನಹಳ್ಳಿಯ ಹದಗೆಟ್ಟ ರಸ್ತೆಗೆ ಮಣ್ಣು ಸುರಿಸುವ ವಿಚಾರದಲ್ಲಿ ಸರಿಯಾಗಿ ಕಾಮಗಾರಿ ನಡೆಸುತ್ತಿಲ್ಲ ಎಂಬ ವಿಷಯಕ್ಕೆ ನಡೆದ ಜಟಾಪಟಿಯಲ್ಲಿ ಮೋಹನ್ ಎಂಬಾತನ ಮೇಲೆ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮೋಹನ್ ಎಂಬಾತನಮೇಲೆ ಮೊಖ ದೊಮ್ಮೆ ಹೂಡಿ ಕ್ರಮ ಕೈಗೊಂಡಿದ್ದರು. ಅದರಂತೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಇಂಜಿನಿಯರ್ ಮಹೇಶ್ ಅವರುಗಳು ಮೋಹನ್ ಎಂಬಾತನ ಮೇಲೆ ಅವ್ಯಾಚ್ಚವಾಗಿ ನಿಂದಿಸಿದ್ದನ್ನು ಸಹ ಪೊಲೀಸರು ದೂರು ದಾಖಲು ಮಾಡಿದ್ದರು.

ಆದರೆ ಪೊಲೀಸರು ಸಹ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ ಕೊಂಡು ಎಫ್ಐಆರ್ ಆಗಿದ್ದರೂ ಅವರನ್ನು ಪೊಲೀಸರು ಇಂದಿನವರೆಗೆ ಪ್ರಶ್ನಿಸಿಲ್ಲ ಹಾಗೂ ಕ್ರಮ ಸಹ ಕೈಗೊಂಡಿಲ್ಲ ಪೊಲೀಸರು ತಟಸ್ಥ ನೀತಿ ಅನುಸರಿಸುತ್ತಿದ್ದಾರೆ ಎಂದು ಚಿನ್ನಸ್ವಾಮಿ ದೂರಿ ಈ ವಿಚಾರದಲ್ಲಿ ಅಧಿಕಾರಿಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳದೆ ಹೋದಲ್ಲಿ ತಾಲೂಕು ದಲಿತ ಸಂಘರ್ಷ ಸಮಿತಿ ಬೀದಿಗಿಳಿದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಘಟನೆಗೆ ಸಂಬಂಧಿಸಿದಂತೆ ಮುಂದಿನ ಒಂದು ವಾರ ಕಾಲ ಪೊಲೀಸರಿಗೆ ಅವಕಾಶ ನೀಡಿದ್ದು ನಮ್ಮ ಹಕ್ಕಿಗೆ ನ್ಯಾಯ ದೊರಕದೆ ಹೋದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಘಟನೆ ನಡೆದಿರುವುದು ಜನವರಿ ಮೂರರಂದು ಆದರೆ ಅಧಿಕಾರಿಗಳು 11 ದಿನಗಳ ನಂತರ ದೂರು ನೀಡಿದ್ದಾರೆ ಈ ದೂರು ನೀಡಿಕೆಯಲ್ಲಿ ಅಧಿಕಾರಿಗಳು ಕೆಲ ರಾಜಕೀಯ ನಾಯಕರ ಸೂಚನೆ ಮೇಲೆ ತಡವಾಗಿ ದೂರು ದಾಖಲು ಮಾಡಲು ಕಾರಣವೇನೆಂದು ಪ್ರಶ್ನಿಸಿದರು.

ತಾಲೂಕು ದಲಿತ ಸಂಘಟನಾ ಸಂಚಾಲಕ ಡಿ ಡಿ ವರ್ಮನ್ ಅವರು ಮಾತನಾಡಿ ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಕಾಮಗಾರಿ ಗುಣಮಟ್ಟ ಪ್ರಶ್ನಿಸಿದರೆ ಅದನ್ನು ಕರ್ತವ್ಯಕ್ಕೆ ಅಡ್ಡಿ ಎಂದು ಸುಳ್ಳು ಮೊಕದ್ದೊಮ್ಮೆ ಹೂಡಿ ನ್ಯಾಯ ನೀತಿಯನ್ನು ಮಣ್ಣು ಪಾಲು ಮಾಡುತ್ತಿದ್ದಾರೆ ಎಂದು ದೂರಿದರು.

ದೇಶಕ್ಕೆಲ್ಲಾ ಒಂದು ಕಾನೂನಾದರೆ ಹೊಳೆನರಸೀಪುರಕ್ಕೆ ಮಾತ್ರ ತನ್ನದೇ ಆದ ಕಾನೂನು ಇದ್ದು ಇಲ್ಲಿ ಯಾರೊಬ್ಬರೂ ಸಹ ನ್ಯಾಯ ನೀತಿಯನ್ನು ಕೇಳದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಆರೋಪ ಹೊತ್ತಿರುವ ಅಧಿಕಾರಿಗಳನ್ನು ತುರ್ತಾಗಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡುವಲ್ಲಿ ತಾಲೂಕು ಆಡಳಿತ ಮುಂದಾಗಬೇಕೆಂದು ಆಗ್ರಪಡಿಸಿದರು 

ಪತ್ರಿಕಾ ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಘಟನಾ ಸಂಚಾಲಕರುಗಳಾದ ಎಚ್ ಡಿ ಚಂದ್ರಶೇಖರ್ ಬಿ ಸಂತೋಷ್ ದಿನೇಶ್ ಅವರುಗಳು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net