

ಹಾಸನ: ತಾಲ್ಲೂಕು ಕಟ್ಟಾಯ ಹೋಬಳಿ ಮಲ್ಲಪ್ಪನಹಳ್ಳಿ ಗ್ರಾಮದ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ಎಂದು ಪ್ರವೀಣ್ ಎಂಬತ ಅನಧಿಕೃತವಾಗಿ ಗ್ರಾಮ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದು.ವಂಶಪಾರಂಪರ‌್ಯವಾಗಿ ಪೂಜೆ ನಡೆಸಿಕೊಂಡು ಬರುತ್ತಿರುವ ಕುಟುಂಬಸ್ಥರೆ ಮುಂದುವರೆಸಲು ಅವಕಾಶ ನೀಡಬೇಕೆಂದು ದಲಿತ ಸಂಘಟನ ಸಮಿತಿ ಹಾಗೂ ಮಲ್ಲಪ್ಪನಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಈ ಗ್ರಾಮದವರಲ್ಲದ ಅರ್ಚಕ ಪ್ರವೀಣ್ ಗ್ರಾಮಸ್ಥರ ಹೆಸರಿನಲ್ಲಿ ಕೆಲವು ನಕಲಿ ಅರ್ಜಿಗಳನ್ನು ಇಲಾಖೆಗೆ ಬೇರೆಯವರಿಂದ ಹಾಕಿಸುವುದು ಮತ್ತು ಗ್ರಾಮಸ್ಥರ ಸಹಿಯನ್ನು ಫೋರ್ಜರಿ ಮಾಡುವುದು, ಬಸವೇಶ್ವರ ಟ್ರಸ್ಟ್ ನ ಹೆಸರಿನಲ್ಲಿ ಗ್ರಾಮಸ್ಥರ ಗಮನಕ್ಕೂ ಬಾರದೇ ಗ್ರಾಮದ ಗೋಮಾಳದ ಜಾಗವನ್ನು ತನ್ನ ಹೆಸರಿಗೆ ಮಂಜೂರು ಮಾಡಿಸಿಕೊಂಡಿರುತ್ತಾನೆ. ಈ ದೇವಸ್ಥಾನದ ಪೂಜೆಯ ವಿಚಾರವಾಗಿ ಗ್ರಾಮದಲ್ಲಿ ಅಶಾಂತಿ ಮೂಡಿದೆ.ಬೂದಿ ಮುಚ್ಚಿದ ಕೆಂಡದ ರೀತಿ ಗ್ರಾಮದಲ್ಲಿ ವಾತಾವರಣ ನಿರ್ಮಾಣವಾಗಿದ್ದು ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು
ಮುಜರಾಯಿ ಇಲಾಖೆಗೆ ಸಂಬಂಧಿಸಿದ ಮಲ್ಲೇಶ್ವ ದೇವಸ್ಥಾನದ ಆಡಳಿತವನ್ನು ಮೂಲ ಅರ್ಚಕರಿಗೆ ವಹಿಸಬೇಕು.ಇದೇ ವಿಚಾರವಾಗಿ ಜಿಲ್ಲಾಧಿಕಾರಿ ನ್ಯಾಯಯದಲ್ಲಿ ಈ ಅರ್ಜಿ ವಿಚಾರಣೆ ನಡೆಯುತ್ತಿದ್ದು, ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
ಇದೆ ವೇಳೆ ಗ್ರಾಮಸ್ಥರು ಹಾಗೂ ದಲಿತ ಸಂಘಟನ ಸಮಿತಿ ಜಿಲ್ಲಾಧ್ಯಕ್ಷ ಚೇತನ್ ಶಾಂತಿಗ್ರಾಮ, ಹರೀಶ್ ಉಳುವಾರೆ, ಶಂಕರ್ ಹೊನ್ನಾವರ, ಮಹೇಶ್ ಮಲ್ಲಪ್ಪನಹಳ್ಳಿ, ರಕ್ಷಿತ್, ಮೋಹನ್, ಪ್ರಭು, ಸಂತೋಷ್, ಸಣ್ಣಸ್ವಾಮಿ, ಬೆಟ್ಟೇಗೌಡ, ಮಂಜೇಗೌಡ ಇತರರು ಇದ್ದರು.