ಮಲ್ಲಣ್ಣ ದೇವಸ್ಥಾನದಲ್ಲಿ 6 ರಿಂದ ಯಜ್ಞ ಮಹೋತ್ಸವ

Mailar Mallana Devstan
Published on

ಬೀದರ್: ಶ್ರಾವಣ ನಿಮಿತ್ತ ಭಾಲ್ಕಿ ತಾಲ್ಲೂಕಿನ ಖಾನಾಪುರದ ಮಲ್ಲಣ್ಣ ದೇವಸ್ಥಾನದಲ್ಲಿ ಸೆಪ್ಟೆಂಬರ್ 6 ರಿಂದ 13 ರ ವರೆಗೆ ರುದ್ರ ಸ್ವಹಕಾರ ಯಜ್ಞ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಮಹೋತ್ಸವ ಅಂಗವಾಗಿ ಪ್ರತಿ ದಿನ ಬೆಳಿಗ್ಗೆ 4ಕ್ಕೆ ಮಲ್ಲಣ್ಣ ದೇವರಿಗೆ ಕಾಕಡ ಆರತಿ, ಬೆಳಿಗ್ಗೆ 5ಕ್ಕೆ ಸತತ ರುದ್ರಾಭಿಷೇಕ, ಮಧ್ಯಾಹ್ನ 12ಕ್ಕೆ ನೈವೇದ್ಯ ಮಂಗಳಾರತಿ, ಮಧ್ಯಾಹ್ನ 3 ರಿಂದ ಸಂಜೆ 5.30 ರವರೆಗೆ ಪಂಡಿತ ಪೂಜಾರಿ ಅವರಿಂದ ಮಲ್ಹಾರಿ ಮಹಾತ್ಮೆ ಪುರಾಣ, ರಾತ್ರಿ 8ಕ್ಕೆ ನೈವೇದ್ಯ ಮಂಗಳಾರತಿ ಜರುಗಲಿದೆ.
ಸೆಪ್ಟೆಂಬರ್ 6 ರಿಂದ 12 ರ ವರೆಗೆ ಬೆಳಿಗ್ಗೆ 9 ರಿಂದ 11.30 ರ ವರೆಗೆ ಘೃತಮಾರಿ(ಗುರತಮಲ್ಲಮ್ಮ) ದೇವಿಗೆ ತುಪ್ಪದ ರುದ್ರಾಭಿಷೇಕ ಹಾಗೂ ಮೂಳಲಿಂಗ(ಜ್ಯೋತಿರ್ಲಿಂಗ)ಕ್ಕೆ ಕ್ಷೀರ ರುದ್ರಾಭಿಷೇಕ ನಡೆಯಲಿದೆ.
13 ರಂದು ಬೆಳಿಗ್ಗೆ 9ಕ್ಕೆ ರುದ್ರ ಸ್ವಹಕಾರ ಯಜ್ಞ, ಮಧ್ಯಾಹ್ನ 3.10ಕ್ಕೆ ಯಜ್ಞ ಪೂರ್ಣಾಹುತಿ, ಸಂಜೆ 4ಕ್ಕೆ ತೀರ್ಥ ಮಹಾ ಪ್ರಸಾದ, ರಾತ್ರಿ 9ಕ್ಕೆ ಭಜನೆ ಜರುಗಲಿದೆ.
21 ಮಂದಿ ವೇದ ಪಂಡಿತ ಬ್ರಾಹ್ಮಣರಿಂದ ಸತತ ಧಾರ ರುದ್ರಾಭಿಷೇಕ ಪೂಜೆ ನೆರವೇರಿಸಲಾಗುತ್ತಿದೆ. ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ ಮೇತ್ರೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಅನಂತರಾವ್ ಕುಲಕರ್ಣಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net