ಮಲೇರಿಯಾ ರೋಗ ಹರಡುವಿಕೆ ತಡೆಗೆ ಸಹಕರಿಸಿ

Malaria disease, Dr. AA Magi, Sindagi, Anopheles mosquito,
ಸಿಂದಗಿ ಪಟ್ಟಣದ ಶ್ರೀದೇವಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ವಿಶ್ವ ಮಲೇರಿಯಾ ದಿನವನ್ನು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಉದ್ಘಾಟಿಸಿದರು. ಎಸ್.ಎಸ್.ಹೂಗಾರ, ಪ್ರಭು ಜಂಗಿನಮಠ, ಎಸ್.ಡಿ.ಕುಲಕರ್ಣಿ ಇತರರಿದ್ದರು.
Published on

ಸಿಂದಗಿ: ಅನಾಫೆಲಿಸ್ ಸೊಳ್ಳೆಯ ಕಡಿತದಿಂದ ಬರುವ ಮಲೇರಿಯಾ ರೋಗವು ತೀವ್ರ ಪರಿಣಾಮಕಾರಿಯಲ್ಲದಿದ್ದರೂ, ಒಮ್ಮೊಮ್ಮೆ ಅದು ಮಾರಕ ರೋಗವಾಗುವ ಗುಣ ಲಕ್ಷಣಗಳನ್ನು ಹೊಂದಿದೆ ಎಂದು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎ.ಎ.ಮಾಗಿ ಹೇಳಿದರು.

ನಗರದಲ್ಲಿನ ಶ್ರೀದೇವಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ ಮತ್ತು ತಾಲೂಕು ಆರೋಗ್ಯ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಮಲೇರಿಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಲೇರಿಯಾ ಒಬ್ಬರಿಂದ ಒಬ್ಬರಿಗೆ ಅನಾೆಲಿಸ್ ಹೆಣ್ಣು ಸೊಳ್ಳೆಗಳು ಕಚ್ಚುವ ಮೂಲಕ ಹರಡುತ್ತದೆ. ದಿನ ಬಿಟ್ಟು ದಿನ ಬರುವ ಚಳಿ ಜ್ವರ ಈ ರೋಗದ ಮುಖ್ಯ ಲಕ್ಷಣವಾಗಿದೆ. ಸಾಮಾನ್ಯವಾಗಿ ಈ ರೋಗದಿಂದ ತೀವ್ರ ಪರಿಣಾಮಗಳು ಆಗದಿದ್ದರೂ, ಾಲ್ಸಿಪಾರಂ ಎನ್ನುವ ಜಾತಿಯ ರೋಗಾಣುವಿನಿಂದ ಕೆಲವೊಮ್ಮೆ ವಿಶೇಷ ತೊಂದರಗಳು ಉಂಟಾಗಬಹುದು. ರೋಗ ಮೆದುಳುಗೂ ಮತ್ತು ಇತರ ಒಳ ಅಂಗಗಳಿಗೆ ಹರಡಿ ಮನುಷ್ಯ ಸಾಯಲೂಬಹುದು ಎಂದರು.

ಎಸ್.ಡಿ. ಕುಲಕರ್ಣಿ, ಪಿ.ವೈ.ಚೌಡಕಿ ಮಾತನಾಡಿ, ಸರ್ಕಾರದ ವತಿಯಿಂದ ಈ ರೋಗ ಹರಡುವುದನ್ನು ತಡೆಯಲು ವ್ಯಾಪಕವಾಗಿ ಎಲ್ಲೆಡೆ ಕಾರ್ಯಕ್ರಮ ಹಾಕಿಕೊಳ್ಳಲಾಗುತ್ತಿದೆ. ಚರಂಡಿಗಳ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು, ನೀರಿಗೆ ಕ್ಲೋರಿನೇಶನ್ ಮಾಡಿಸುವುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು.

ಅಲ್ಲದೆ ಸ್ವಯಂ ರಕ್ಷಣೆ ವಿಧಾನಗಳಾದ ಸೊಳ್ಳೆ ಪರದೆ, ಸೊಳ್ಳೆ ಬತ್ತಿಗಳ ಉಪಯೋಗ , ಸಂಜೆ ಮನೆಯಲ್ಲಿ ಬೇವಿನ ಸೊಪ್ಪಿನ ಹೊಗೆ ಹಾಕುವುದು, ಕಿಟಕಿ ಮತ್ತು ಬಾಗಿಲುಗಳಿಗೆ ಜಾಲರಿಗಳನ್ನು ಅಳವಡಿಸುವುದು, ಮನೆ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವದು ಎಲ್ಲರ ಜವಾಬ್ದಾರಿಯಾಗಿರುತ್ತದೆ. ನೆರೆ ರಾಜ್ಯಗಳಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಿರುವುದರಿಂದ ಬೇರೆ ರಾಜ್ಯಗಳಿಗೆ ವಲಸೆ ಹೋಗಿ ಬರುವ ಜನ ಬಂದ ತಕ್ಷಣ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.

ತಾಲೂಕು ವೈದ್ಯಾಧಿಕಾರಿ ಡಾ.ಆರ್.ಎಸ್.ಇಂಗಳೆ, ಪ್ರಭು ಜಂಗಿನಮಠ, ವೀರೇಂದ್ರ ಪವಾಡೆ, ಪ್ಯಾರಾ ಮೆಡಿಕಲ್ ಕಾಲೇಜಿನ ಅಧ್ಯಕ್ಷ ಎಸ್.ಎಸ್.ಹೂಗಾರ, ಭೀಮಾಶಂಕರ ಬಿರಾದಾರ, ರಾಹುಲ್ ಚವಾಣ, ಬಸವರಾಜ ಪಾಟೀಲ ಹಾಗೂ ಕಾಲೇಜು ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net