ಮಲೇರಿಯಾ ತಡೆಗೆ ಸ್ವಚ್ಛತೆಯೇ ಸೂತ್ರ

1
Published on

ಕೆ.ಆರ್.ಪೇಟೆ: ಮಲೇರಿಯಾ ತಡೆಗೆ ಸ್ವಚ್ಛತೆ ಪಾಲನೆಯೇ ಸೂತ್ರ ಎಂದು ತಾಲೂಕು ಆರೋಗ್ಯಾಕಾರಿ ಡಾ.ಅಜಿತ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದೊಂದಿಗೆ ಮಲೇರಿಯಾ ತಡೆ ಮಾಸಾಚರಣೆ ಸಂಬಂಧ ಶಾಲಾ ಶಿಕ್ಷಕರಿಗೆ ಹಾಗೂ ಸಂಯೋಜಕರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಶೂನ್ಯ ಮಲೇರಿಯಾ ಗುರಿ ತಲುಪಲು ಎಲ್ಲರೂ ಸಹಕರಿಸಬೇಕು. ವಿದ್ಯಾರ್ಥಿಗಳಿಗೆ ರೋಗವಾಹಕಗಳಿಂದ ಹರಡಬಹುದಾದ ಕಾಯಿಲೆ ಬಗ್ಗೆ ಅರಿವು ಮೂಡಿಸಬೇಕು. 2023ರ ವೇಳೆಗೆ ದೇಶವನ್ನು ಮಲೇರಿಯಾ ಮುಕ್ತ ಮಾಡಬೇಕು ಎಂದು ಅವರು ಹೇಳಿದರು.
ಕೀಟಶಾಸ ತಜ್ಞೆ ಜಾನೆಟ್ ಅವರು ಮಲೇರಿಯಾ ರೋಗದ ಲಕ್ಷಣಗಳು, ಅದರ ಪರೀಕ್ಷೆ, ಚಿಕಿತ್ಸೆ, ನಿಯಂತ್ರಣ ಕ್ರಮ ಹಾಗೂ ಮುಂಜಾಗ್ರತೆ ವಹಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಕಾರಿ ಶಿವಮ್ಮ, ಜಿಲ್ಲಾ ಮೇಲ್ವಿಚಾರಕ ಮಂಚೇಗೌಡ. ಆರೋಗ್ಯ ನಿರೀಕ್ಷಣಾಕಾರಿ ಸತೀಶ್, ಧಮೇಂದ್ರ, ಕಾರ್ಯಕ್ರಮ ವ್ಯವಸ್ಥಾಪಕ ವಿನಯ್, ರವಿ, ಸಿಆರ್‌ಪಿಗಳಾದ ದೇವರಾಜು, ಗುರುಲಿಂಗ, ಶಿಕ್ಷಕಿ ಕುಮಾರಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net