

ಹಾಸನ: ಹೊಸ ಹೊಸ ತಂತ್ರಜ್ಞಾನಗಳು ಬದಲಾವಣೆಯಾಗುತ್ತಿರುವ ವೇಳೆ ನಾವುಗಳು ಕೂಡ ಬದಲಾವಣೆ ಆಗಲು ಇಂತಹ ತರಬೇತಿ ಶಿಬಿರ ಸಹಕಾರಿ ಆಗಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಎ.ಜೆ. ಕೃಷ್ಣಯ್ಯ ತಿಳಿಸಿದರು.
ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪ್ರಾಧ್ಯಾಪಕರಿಗೆ, ಉಪಾನ್ನಾಸಕರು ನೌಕರರಿಗೆ, ಸಿಬ್ಬಂಧಿ ವರ್ಗದವರಿಗೆ ಒಂದು ದಿನದ ವಿಚಾರ ಸಂಕಿರಣ, ತರಭೇತಿ ಶಿಬಿರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಟೆಕ್ನಾಲಜಿ ಬದಲಾವಣೆ ಯಾಗುತ್ತಿರುವ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ಬದಲಾವಣೆ ತರಲು ಇಂಥ ತರಭೇತಿ ಶಿಬಿರ ಪ್ರಯೋಜನವಾಗಲಿದೆ ಎಂದರು.
ವಿದ್ಯಾರ್ಥಿಗಳಿಗೆ ತಿಳಿಸುವ ಪಾಠದ ವಿಧಾನ ಮತ್ತು ಅವರ ಕಲಿಕೆಯ ಕ್ರಮಗಳು, ಹೊಸ ಹೊಸ ವಿಧಾನಗಳನ್ನು ನಾವು ಅನೂಸರಿಸಿ ಇವತ್ತಿನ ವ್ಯವಸ್ಥೆಗೆ ಬದಾಲಾವಣೆ ತಂತ್ರಜ್ಞಾನ ಅಳವಡಿಸಿಕೊಂಡು ಕಲ್ಪಿಸಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ನಿರ್ದೇಶಕ ಡಾ. ಎಸ್. ಪ್ರದೀಪ್ ಮಾತಾನಾಡಿ, ನೌಕರ ವರ್ಗಕ್ಕೆ ತರಭೇತಿ ನೀಡುವುದು ಅತ್ಯುತ್ತಮವಾಗಿದೆ. ಇದರಿಂದ ನಾವು ಕಾಲೇಜಿನಲ್ಲಿ ನಡೆಸುವ ಆಡಳಿತ, ಪಾಠ ಪ್ರವಚನಗಳಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಎ.ಎಚ್. ಸಾಗರ್ ವಿಶೇಷ ತರಬೇತಿ ಅಧಿಕಾರಿಗಳು ಮಾತಾನಾಡಿ, ನಾವು ಆಡಳಿತಾತ್ಮಕ ದೃಷ್ಟಿಯಿಂದ ಹಾಗೂ ಇವತ್ತಿನ ಶಿಕ್ಷಣಕ್ಕೆ ತಕ್ಕಂತೆ ನಾವು ತರಭೇತಿ ಪಡೆದು ವಿದ್ಯಾರ್ಥಿಗಳಿಗೆ ಶಿಕ್ಷಣ ನಿಡುವುದು ಅಗತ್ಯವಿದೆ. ಇದರಿಂದ ನೌಕರರ ವರ್ಗದವರಿಗೆ ಹಾಗೂ ಪ್ರಾಧ್ಯಾಪಕರು ಮತ್ತು ಉಪನ್ಯಾಸಕರಿಗೆ ಉತ್ತಮ ಬೋಧನೆ ಮಾಡಲು ತರಬೇತಿ ಪಡೆಯುವುದು ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಚೌಡುವಳ್ಳಿ ಜಗದೀಶ್, ಡಾ. ಎಸ್. ಎಜೀಲ್ ವಣ್ಣನ್,ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಮೋಹನ್ ಕುಮಾರ್ ಚೌವ್ಹಾಣ್, ಕಾಲೇಜಿನ ಪ್ರಾಧ್ಯಾಪಕರು, ಉಪನ್ಯಾಸಕರು ನೌಕರರು ಭಾಗವಹಿಸಿದ್ದರು.