ಮಲೆನಾಡಲ್ಲಿ ಗದ್ದರ್ ನುಡಿ ನಮನ

GADDAR
Published on

ಶಿವಮೊಗ್ಗ: ಕ್ರಾಂತಿಕಾರಿ ಹಾಡುಗಳಿಂದ ಗಮನಸೆಳೆದಿದ್ದ ಗದ್ದರ್ ನಿಧನದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಹಾಗೂ ಸಮಾನ ಮನಸ್ಕರು ಆ.9ರ ಸಂಜೆ 5ಕ್ಕೆ ಮೀಡಿಯಾ ಹೌಸ್‌ನಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಿದ್ದಾರೆ ಎಂದು ಆಯೋಜಕ ದೇಶಾದ್ರಿ ಹೊಸ್ಮನೆ ತಿಳಿಸಿದ್ದಾರೆ. 1996, 1998ರಲ್ಲಿ ಜಿಲ್ಲೆಗೆ ಆಗಮಿಸಿದ್ದ ಗದ್ದರ್ ಕುವೆಂಪು ವಿವಿ, ಭದ್ರಾವತಿ, ಶಿವಮೊಗ್ಗದ ಸೈನ್ಸ್ ಮೈದಾನದಲ್ಲಿ ಸಾವಿರಾರು ಜನರು ಭಾಗವಹಿಸಿದ್ದ ಸಮಾವೇಶದಲ್ಲಿ ಕ್ರಾಂತಿಗೀತೆ, ನೃತ್ಯಗಳ ಮೂಲಕ ಮಿಂಚಿನ ಸಂಚಾರ ಉಂಟುಮಾಡಿದ್ದರು. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ನುಡಿ ನಮನ ಆಯೋಜಿಸಲಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net