

ಚಾಮರಾಜನಗರ: ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸೆ.23 ರಿಂದ 26ರವರೆಗೆ ಮಹಾಲಯ ಅಮಾವಾಸ್ಯೆ ಜಾತ್ರೆ, ಅ.3 ರಿಂದ 5ರವರೆಗೆ ದಸರಾ ಜಾತ್ರೆ, ಅ.22ರಿಂದ 26ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ, ಅ.31, ನ.7, 14, 21 ರಂದು ಕಾರ್ತಿಕ ಸೋಮವಾರದ ಜಾತ್ರಾ ಮಹೋತ್ಸವ ನಡೆಯಲಿದೆ.
ಸೆ.23ರಂದು ಮಹಾಲಯ ಜಾತ್ರಾ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. 24ರಂದು ಎಣ್ಣೆಮಜ್ಜನ, ತೈಲಾಭಿಷೇಕ, ವಿಶೇಷ ಸೇವೆ ಉತ್ಸವಗಳು ನಡೆಯಲಿವೆ. 25ರಂದು ಮಹಾಲಯ ಅಮಾವಾಸ್ಯೆ ವಿಶೇಷ ಸೇವೆ ಉತ್ಸವ ನಡೆಯಲಿವೆ.
ಸೆ.26 ರಂದು ಶರನ್ನವರಾತ್ರಿ ಆರಂಭ, ಉಯ್ಯಲೋತ್ಸವ ಪ್ರಾರಂಭ, ಅ.4ರಂದು ಮಹಾನವಮಿ, ಆಯುಧಪೂಜೆ, ಅ.5ರಂದು ವಿಜಯದಶಮಿ, ಕುದುರೆ ವಾಹನೋತ್ಸವ, ದಶಮಿ ಪೂಜೆ ನೆರವೇರಲಿದೆ.
ಅ.22ರಂದು ದೀಪಾವಳಿ ಜಾತ್ರೆ ಪ್ರಯುಕ್ತ ವಿಶೇಷ ಕಾರ್ಯಕ್ರಮ, ಅ.23ರಂದು ಎಣ್ಣೆಮಜ್ಜನ ಅಭಿಷೇಕ ಸೇವೆ, ಉತ್ಸವಾಧಿಗಳು, ಅ.24ರಂದು ನರಕ ಚತುರ್ದಶಿ, ಅಮಾವಾಸ್ಯೆ, ಸೇವೆ, ಉತ್ಸವಾಧಿಗಳು, ಅ.25ರಂದು ದೀಪಾವಳಿ ಹಾಲರವೆ ಉತ್ಸವ ಇರಲಿದೆ. ಅ.26ರಂದು ಬೆಳಗ್ಗೆ 9.15 ರಿಂದ 9.45 ಗಂಟೆಯವರೆಗೆ ಮಹಾರಥೋತ್ಸವ ಜರುಗಲಿದೆ.
ಅ.31ರಂದು ಮೊದಲನೇ ಕಾರ್ತಿಕ, ನ.7ರಂದು ಎರಡನೇ ಕಾರ್ತಿಕ, 14ರಂದು ಮೂರನೇ ಕಾರ್ತಿಕ ಸೋಮವಾರ ಪೂಜಾ ಕಾರ್ಯಕ್ರಮಗಳು, ನ.21ರಂದು ನಾಲ್ಕನೇ ಕಾರ್ತಿಕ ಸೋಮವಾರ ಶ್ರೀಮಹದೇಶ್ವರ ಜ್ಯೋತಿ ದರ್ಶನ, ನ.22ರಂದು ಕಾರ್ತಿಕ ಎಣ್ಣೆಮಜ್ಜನ ಸೇವೆ, 23ರಂದು ಕಾರ್ತಿಕ ಅಮಾವಾಸ್ಯೆ, ವಿಶೇಷ ಸೇವೆ ಉತ್ಸವಾದಿಗಳು ನಡೆಯಲಿವೆ.
ಪ್ರತಿದಿನ ಸಂಜೆ 7 ಗಂಟೆಗೆ ಬಂಗಾರದ ರಥೋತ್ಸವ ನೆರವೇರಲಿದೆ. ವಿಶೇಷ ಸೇವೆ ಉತ್ಸವಗಳು ಮತ್ತು ಮಹಾರಥೋತ್ಸವ ಸಾಲೂರು ಬೃಹನ್ಮಠಾಧ್ಯಕ್ಷ ಶಾಂತಮಲ್ಲಿಕಾರ್ಜುನಸ್ವಾಮಿ ಅವರ ಮಾರ್ಗದರ್ಶನದಲ್ಲಿ ನೆರವೇರಲಿದೆ ಎಂದು ಶ್ರೀ ಮಲೈ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.