ಮಲೆ ಮಹದೇಶ್ವರ ಬೆಟ್ಟದ ಆನೆಗೆ ವಿಮೆ

02 HANUR 2
Published on

ಹನೂರು: ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿರುವ ಸಾಕಾನೆ ಉಮಾಳಿಗೆ ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಗುರುವಾರ ಆರೋಗ್ಯ ವಿಮೆ ಮಾಡಿಸಲಾಯಿತು.


ಮಹದೇಶ್ವರಬೆಟ್ಟದಲ್ಲಿ ಹಲವು ವರ್ಷಗಳಿಂದ 48 ವರ್ಷದ ಉಮಾ ಎಂಬ ಹೆಸರಿನ ಹೆಣ್ಣಾನೆ ಇದ್ದು, ದೇವಸ್ಥಾನದಲ್ಲಿ ನಡೆಯುವ ಹಲವು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತದೆ. ಪ್ರತಿ ವರ್ಷ ಜರುಗುವ ಮಹಾ ರಥೋತ್ಸವದಲ್ಲೂ ಭಾಗಿಯಾಗುವುದರಿಂದ ಭಕ್ತರಲ್ಲಿಯೂ ಆನೆ ಬಗ್ಗೆ ಆರಾಧನಾ ಭಾವನೆ ಇದೆ. ಆದರೆ, ಉಮಾಳಿಗೆ ಕಳೆದ ಎರಡೂವರೆ ವರ್ಷದಿಂದ ಆರೋಗ್ಯ ವಿಮೆ ಮಾಡಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಆಡಳಿತ ಮಂಡಳಿ ಪಶು ವೈದ್ಯರಿಂದ ಆನೆ ಆರೋಗ್ಯ ತಪಾಸಣೆ ನಡೆಸಿ ಪ್ರತಿ ವರ್ಷ 11 ಸಾವಿರ ರೂ. ಪಾವತಿಸುವುದರ ಮೂಲಕ 5 ಲಕ್ಷ ರೂ. ಮೌಲ್ಯದ ವಿಮೆ ಮಾಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net