

ಬನ್ನೂರು: ಪಟ್ಟಣದ ಸಮೀಪದ ಮಲಿಯೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರೇಖಾ ರಂಗಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ವಿ.ಸಿದ್ದೇಗೌಡ ಆಯ್ಕೆಯಾದರು.
ಗ್ರಾಮ ಪಂಚಾಯಿತಿಯಲ್ಲಿ 18 ಸದಸ್ಯರಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ರೇಖಾ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದೇಗೌಡ ಮತ್ತು ರಾಮೇಗೌಡ ನಾಮಪತ್ರ ಸಲ್ಲಿಸಿದ್ದು, ಸಿದ್ದೇಗೌಡ 11 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಕಾವೇರಿ ನಿಗಮದ ಅಭಿಯಂತರ ಚಂಗಪ್ಪ ಕಾರ್ಯನಿರ್ವಹಿಸಿದರು. ಸದಸ್ಯರಾದ ಕೆ.ಬಿ.ಜಯರಾಮು, ರಾಣಿ, ಎನ್.ಶಿಲ್ಪಾ, ಮಹದೇವಮ್ಮ, ಬಾಬು, ರಾಮಕೃಷ್ಣ, ಯಲ್ಲಪ್ಪ, ರತ್ನಮ್ಮ, ರಾಮೇಗೌಡ, ಡಿ.ಜಯರಾಮು, ಮಮತಾ, ರಾಮಲಿಂಗ, ಕೆ.ಸಿ.ಮಮತಾ ನಾಗೇಂದ್ರ, ಶಾಂತಮ್ಮ, ಶಿವಮ್ಮ, ಸಿದ್ದೇಗೌಡ, ಎಂ.ಡಿ.ರಂಗಸ್ವಾಮಿ, ಭೀಮ, ಶಂಕರೇಗೌಡ, ಮರಿಗೌಡ, ಬಸವಣ್ಣ, ಗಾಡಿಕೃಷ್ಣ, ಮಹದೇವು, ನವೀನ, ಮಲ್ಲಿಕಾರ್ಜುನ, ಯೋಗಿ, ಯಶ್ವಂತ್, ರಕ್ಷಿತ್, ಮಲಿಯೂರು ಬಾಬು, ಜಯರಾಮೇಗೌಡ, ಪ್ರಕಾಶ್, ಶಂಬು, ಸಂದೀಪ್, ವಸಂತ, ಮಹೇಶ್, ರಾಜು, ಜಗನ್, ಸಿದ್ದಯ್ಯ, ಮಹದೇವಮ್ಮ ದೊಳ್ಳಯ್ಯ, ಭಾಗ್ಯಲಕ್ಷ್ಮೀ, ದೊಳ್ಳಯ್ಯ, ರಾಮಲಿಂಗು, ನಾಗೇಶ್, ಚಿಕ್ಕಸ್ವಾಮಿ ಇತರರು ಇದ್ದರು.