ಮಲಬಾರ್‌ನಿಂದ ೫೧,೦೦೦ ಆಹಾರ ಪೊಟ್ಟಣ

28 Malabar
Published on

ಕಲಬುರಗಿ: ಪೌಷ್ಟಿಕ ಆಹಾರದ ಅಗತ್ಯವಿರುವ ನಿರ್ಗತಿಕರಿಗೆ ನಿತ್ಯ ಊಟ ಪೂರೈಸುವ ಮಲಬಾರ್ ಗ್ರೂಪ್‌ನ ಹಸಿವು ಮುಕ್ತ ಜಗತ್ತು ನಿರ್ಮಾಣದ ಯೋಜನೆಯನ್ನು ಹೆಚ್ಚುವರಿ ಸ್ಥಳಗಳಿಗೆ ವಿಸ್ತರಿಸುವುದಕ್ಕೆ ಮಂಗಳವಾರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಡೈಮಂಡ್ಸ್ನಲ್ಲಿ ಚಾಲನೆ ನೀಡಲಾಯಿತು.
ಪ್ರಸ್ತುತ ೩೧ ಸಾವಿರ ಆಹಾರ ಪೊಟ್ಟಣ ವಿತರಿಸುತ್ತಿದ್ದು, ಅದನ್ನು ೫೧ ಸಾವಿರಕ್ಕೆ ಹೆಚ್ಚಿಸಲಾಗಿದೆ. ಕಲಬುರಗಿ ನಗರದಲ್ಲಿ ೫೦೦ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ೨- ಶೂನ್ಯ ಹಸಿವು ಯೋಜನೆಗೆ ಪೂರಕವಾಗಿ ಈ ಸೇವಾ ಕಾರ್ಯಕ್ಕೆ ಮಲಬಾರ್ ಕಾರ್ಯ ಮುಂದಾಗಿದೆ.
ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಹಾಂತೇಶ ಜೇವರ್ಗಿ, ಕಾಂಗ್ರೇಸ್ ಮುಖಂಡ ನೀಲಕಂಠರಾವ ಮೂಲಗೆ, ಪ್ರಮುಖರಾದ ಶರಣು ಪಾಟೀಲ್, ಸಮೀರ ಭಾಗವಾನ್, ಅಣ್ಣವೀರಪ್ಪ ಸಜ್ಜನ್, ಅಯ್ಯುಬ್ ಖಾನ್ ಮಂಗಳವಾರ ಏರ್ಪಡಿಸಿದ್ದ ಹಸಿವು ಮುಕ್ತ ದಿನಾಚರಣೆಯಲ್ಲಿ ಯೋಜನೆಗೆ ಚಾಲನೆ ನೀಡಿದರು.
ಮಲಬಾರ್ ಗ್ರೂಪ್‌ನ ಶಾಖೆಯ ಉಪ ನಿರ್ದೇಶಕ ಜೀಸ್ನು ಎಸ್. ಸಜು ಅಧ್ಯಕ್ಷತೆ ವಹಿಸಿದ್ದರು.
ಹಸಿವು ಮುಕ್ತ ಜಗತ್ತು ಯೋಜನೆಯನ್ನು ಕರ್ನಾಟಕದಲ್ಲಿ ೨೦೨೩ರಲ್ಲಿ ಆರಂಭಿಸಲಾಯಿತು. ೪,೪೫೦ ಜನರಿಗೆ ಪ್ರತಿದಿನ ಒಂದು ಹೊತ್ತಿನ ಊಟ ನೀಡುತ್ತಿದ್ದೆವು. ಮುಂದೆ ೭,೧೬೭ ಜನರಿಗೆ ಪ್ರತಿದಿನ ಊಟ ನೀಡಲಾಗುತ್ತಿದೆ. ಈ ಮೂಲಕ ಕರ್ನಾಟಕದ ೧೨ ಸ್ಥಳಗಳಲ್ಲಿ ವಾರ್ಷಿಕ ೨೬,೧೫,೯೫೫ ಊಟವನ್ನು ನೀಡಲಿz್ದÉÃವೆ. ಮಲಬಾರ್ ಚಾರಿಟೇಬಲ್ ಟ್ರಸ್ಟ್ ವಿಶ್ವದ ೭೧ ಸ್ಥಳಗಳಲ್ಲಿ ೫೧,೦೦೦ ಜನರಿಗೆ ಪ್ರತಿದಿನ ಊಟವನ್ನು ನೀಡಲಿದ್ದು, ವಾರ್ಷಿಕ ೧೮.೬ ಮಿಲಿಯನ್ ಊಟವನ್ನು ವಿತರಣೆ ಮಾಡಲಿದೆ. ೧೬ ರಾಜ್ಯಗಳ ೩೭ ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net