ಮಲಪ್ರಭಾ ಕಾಲುವೆ ಸೈಪನ್​ ದುರಸ್ತಿಗೆ ಒತ್ತಾಯ

3
ಮುನವಳ್ಳಿ ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿದರು. ವಿರೂಪಾ ಮಾಮನಿ, ಸುಭಾಷ ಪಾಟೀಲ, ಶೇಖರ ಗೋಕಾವಿ ಇತರರು ಇದ್ದರು.
Published on

ಮುನವಳ್ಳಿ: ಮಲಪ್ರಭಾ ಎಡದಂಡೆ ಕಾಲುವೆಯ ಸೈಪನ್​ ಒಡೆದು ಸುತ್ತಮುತ್ತಲಿನ ಸುಮಾರು 9 ಗ್ರಾಮಗಳ ರೈತರು, ಜನಜಾನುವಾರುಗಳಿಗೆ ನೀರಿನ ತೊಂದರೆಯಾಗಿದೆ ಎಂದು ರಾಜ್ಯ ಸರ್ಕಾರ ಹಾಗೂ ನೀರಾವರಿ ಇಲಾಖೆ ವಿರುದ್ಧ ಸವದತ್ತಿ ತಾಲೂಕಿನ ಬಿಜೆಪಿ ಮುಖಂಡ ವಿರುಪಾ ಮಾಮನಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ಪಟ್ಟಣದ ಶಿಂದೋಗಿ ಕ್ರಾಸ್​ ಬಳಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಸೋಮವಾರ ಪ್ರತಿಭಟಿಸಿದರು.

ವಿರೂಪಾ ಮಾಮನಿ ಮಾತನಾಡಿ, ಸೈಪನ್​ ಒಡೆದು 2 ವರ್ಷಗಳ ಕಳೆದರೂ ಸಂಬಂಧಪಟ್ಟ ಇಲಾಖೆ ದುರಸ್ತಿ ಮಾಡಿಲ್ಲ. ಕೂಡಲೇ ಕ್ರಮ ಕೈಗೊಂಡು ರೆತರಿಗೆ ನ್ಯಾಯ ಒದಗಿಸಬೇಕು ಎಂದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿಧಾನ ಪರಿಷತ್​ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಎರಡು ವರ್ಷದಲ್ಲಿ ಹಲವಾರು ಬಾರಿ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮನವಿ ನೀಡಿದ್ದರೂ, ಕೇವಲ ಭರವಸೆ ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು. ಮಲಪ್ರಭಾ ನೀರಾವರಿ ಯೋಜನಾ ಇಲಾಖೆಯ ಮುಖ್ಯ ಅಭಿಯಂತ ಎ.ಎಲ್​.ವಾಸನದ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮಹಾಂತೇಶ ಕವಟಗಿಮಠ, ಕೂಡಲೇ ಆಡಳಿತಾತ್ಮಕ ಅನುಮೋದನೆ ಪಡೆದು ತ್ವರಿತಗತಿಯಲ್ಲಿ ದುರಸ್ತಿ ಕಾಮಗಾರಿ ಕೈಗೊಂಡು ರೆತರಿಗೆ ನ್ಯಾಯ ಒದಗಿಸಿಕೊಡಲು ಮನವಿ ಮಾಡಿದರು. ದುರಸ್ತಿ ಕೈಗೊಳ್ಳುವ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ನೀರಾವರಿ ಅಧಿಕಾರಿಗಳು ಮನವಿ ಸ್ವೀಕರಿಸಿದರು. ಬಿಜೆಪಿ ಜಿಲ್ಲಾಧ್ಯ ಸುಭಾಷ ಪಾಟೀಲ, ತಾಲೂಕಾಧ್ಯ ಈರಣ್ಣ ಚಂದರಗಿ, ಶೇಖರ ಗೋಕಾವಿ, ಜಗದೀಶ ಕೌಜಗೇರಿ, ರಮೇಶ ಗೋಮಾಡಿ, ಮಹಾಂತೇಶ ಯಕ್ಕೇರಿ, ವಿಜಯ ಅಮಠೆ, ಸುಭಾಸ ಗೀದಿಗೌಡ್ರ, ಮಹಾಂತೇಶ ಕುರಬಗಟ್ಟಿ, ಸತ್ಯಪ್ಪ ಅಡವಿ, ಅಪ್ಪು ನುಗ್ಗಾನಟ್ಟಿ, ಈಶ್ವರ ಯಕ್ಕೇರಿ, ಅರ್ಜುನ ಯಕ್ಕೇರಿ, ಹೂವಪ್ಪ ಕಣವಿ, ಸುರೇಶ ಶಿಂಧೆ, ವಿ.ಎಚ್​. ಪಾಟೀಲ, ಪ್ರಕಾಶ ನಲವಡೆ, ಎಚ್​.ಆರ್​. ತೋರಣಗಟ್ಟಿ, ಮದನ ಶಿಂಧೆ, ಅನಿಲ ಕದಂ, ಶಿವಾನಂದ ಮೇಟಿ, ಗೌತಮ ದ್ಯಾಮನಗೌಡ್ರ, ಬಸು ಶಿಗ್ಗಾಂವಿ, ಗುರು ಮೆಳವಂಕಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net