ಮಲಗಿದ್ದೋರೆಲ್ಲ ಎದ್ದು ರಾಜಕೀಯ ಮಾಡುತ್ತಿದ್ದಾರೆ

28-cpt-1p
Published on

ಚನ್ನಪಟ್ಟಣ: ರಾಮನಗರ ಜಿಲ್ಲೆಯನ್ನು ಹೃದಯದಲ್ಲಿ ಇರಿಸಿಕೊಂಡಿದ್ದೇನೆ. ಹಣ, ದಬ್ಬಾಳಿಕೆಯಿಂದ ಜಿಲ್ಲೆಯಲ್ಲಿ ನನ್ನನ್ನು ಬಗ್ಗು ಬಡಿಯಲು ಯತ್ನಿಸುವವರು ಇನ್ನೂ 10 ಜನ್ಮ ಎತ್ತಿ ಬಂದರೂ ಸಾಧ್ಯವಾಗುವುದಿಲ್ಲ ಎಂದು ವಾಜಿ ಸಿಎಂ ಎಚ್‌ಡಿ ಕುವಾರಸ್ವಾಮಿ ರಾಜಕೀಯ ವಿರೋಧಿಗಳಿಗೆ ಚಾಟಿ ಬೀಸಿದರು.

ನಗರದ ರಾಜಾಕೇಂಪೆಗೌಡ ಬಡಾವಣೆಯಲ್ಲಿ ಎಲೆಕ್ಟ್ರಿಕ್ ಯುಜಿ ಕೇಬಲ್ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ವಾತನಾಡಿ, ರಾಜಕೀಯವಾಗಿ ಯಾರನ್ನೂ ಟಾರ್ಗೆಟ್ ವಾಡುವುದಿಲ್ಲ. ಆದರೆ ಎಲ್ಲರೂ ನನ್ನನ್ನು ಟಾರ್ಗೆಟ್ ವಾಡುತ್ತಾರೆ. ರಾಮನಗರದಿಂದ ನನ್ನನ್ನು ಖಾಲಿ ವಾಡಿಸೋಕೆ ಅವರಿಗೆ ಆಗುತ್ತಾ, ನನಗೂ ರಾಮನಗರ ಜಿಲ್ಲೆಗೂ ಇರುವ ಸಂಬಂಧ ಅವರಿಗೆ ಗೊತ್ತಿಲ್ಲ. ಜಿಲ್ಲೆಯ ಜನತೆಗೂ ದೇವೇಗೌಡರ ಕುಟುಂಬಕ್ಕೂ ಪೂರ್ವಜನ್ಮದ ಸಂಬಂಧ ಇದೆ. ಇಷ್ಟು ದಿನ ಜಿಲ್ಲೆಯಲ್ಲಿ ಮಲಗಿದ್ದವರೆಲ್ಲ ಎದ್ದು ರಾಜಕೀಯ ವಾಡುತ್ತಿದ್ದಾರೆ ಎಂದು ಡಿ.ಕೆ. ಸಹೋದರರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಜೆಡಿಎಸ್ ಮುಖಂಡ ಸಿ.ಎಸ್.ಪುಟ್ಟರಾಜು ಹಾಗೂ ಸಿದ್ದರಾಮಯ್ಯ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಪುಟ್ಟರಾಜು ಹಾಗೂ ಇತರ ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ವಾಡಿರುವ ವಿಚಾರ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಯಾರನ್ನು ಭೇಟಿ ವಾಡುತ್ತಾರೋ ಅದನ್ನು ಕಟ್ಟಿಕೊಂಡು ನನಗೇನು? ನನಗೆ ನನ್ನ ಪಕ್ಷ, ಕಾರ್ಯಕರ್ತರು, ಜನ ಮುಖ್ಯ. ಕಾರ್ಯಕರ್ತರಿದ್ದರಷ್ಟೇ ಪಕ್ಷ ಮತ್ತು ಮುಖಂಡರು ಬೆಳೆಯೋದು ಎಂದರು.

ಬಹಳಷ್ಟು ಮುಖಂಡರು ಜೆಡಿಎಸ್‌ನಲ್ಲಿ ಬೆಳೆದಿದ್ದಾರೆ. ನಂತರ ಪಕ್ಷ ಬಿಟ್ಟು ಹೋಗಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ಮುಖಂಡರನ್ನು ಬೆಳೆಸುವ ಶಕ್ತಿಯಿದೆ. 2023ಕ್ಕೆ ಜೆಡಿಎಸ್ ಶಕ್ತಿ ಏನೆಂದು ತಿಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಹಗಲು ಕನಸು: ಕಾಂಗ್ರೆಸ್‌ನವರು ಮೇಕೆದಾಟು ಪಾದಯಾತ್ರೆ ಬಳಿಕ ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಇಲ್ಲಿಂದಲೇ ಮತ್ತೆ ಪಾದಯಾತ್ರೆ ಪ್ರಾರಂಭ ವಾಡುತ್ತೇವೆ ಎಂದಿದ್ದಾರೆ. ಒಂದಲ್ಲ, ಇನ್ನೂ 10 ಪಾದಯಾತ್ರೆ ವಾಡಲಿ, ಇದು ದುರಹಂಕಾರದ ವಾತಲ್ಲ. ಅವರ ನಡವಳಿಕೆಗಳನ್ನು ಅರ್ಥ ವಾಡಕೊಂಡಿದ್ದೇನೆ. ಈ ಜಿಲ್ಲೆಯ ಜನರನ್ನು ಗೆಲ್ಲೋದು ಅಷ್ಟು ಸುಲಭವಲ್ಲ. ಪ್ರೀತಿ, ವಿಶ್ವಾಸ, ದುಡಿಮೆ ಇದ್ದರಷ್ಟೇ ಜಿಲ್ಲೆಯಲ್ಲಿ ಉಳಿಯಲು ಸಾಧ್ಯ. ಹಣಕ್ಕೆ ಇಲ್ಲಿ ಬೆಲೆ ಸಿಗಲ್ಲ ಎಂದು ಎಚ್‌ಡಿಕೆ ಟಾಂಗ್ ನೀಡಿದರು.

ಇಬ್ರಾಹಿಂ ನಮಗೆ ಹಳಬರು:  ಸಿ.ಎಂ.ಇಬ್ರಾಹಿಂ ದೇವೇಗೌಡರ ಗರಡಿಯಲ್ಲಿ ಬೆಳೆದವರು. ನಮ್ಮ ಪಕ್ಷಕ್ಕೆ ಹಳಬರು, ನಾನು ಸಿದ್ದರಾಮಯ್ಯ ಜತೆ ಹೋಗಿ ದೇವೇಗೌಡರನ್ನು ದೂರ ವಾಡಿಕೊಂಡೆ. ಅವರ ಕೊನೆ ಆಸೆಯಂತೆ ಮುಂದಿನ ಬಾರಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು. ಹಾಗಾಗಿ ಜೆಡಿಎಸ್ ಸೇರುತ್ತೇನೆ ಎಂದು ಅವರೇ ಹೇಳಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ ಎಂದರು. ಬೊವ್ಮಾಯಿ ಸರ್ಕಾರ 6 ತಿಂಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಜಾಹಿರಾತುಗಳ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಜನಸಾವಾನ್ಯರ ಪರಿಸ್ಥಿತಿ ಬಗ್ಗೆ ನೋಡುತ್ತಿಲ್ಲ. ಈ 6 ತಿಂಗಳು ಸರ್ಕಾರ ಇತ್ತು ಅನ್ನುವ ಭಾವನೆ ಜನರಲ್ಲಿ ಇಲ್ಲ. ಸರ್ಕಾರದ ಕಾರ್ಯವೈಖರಿ ಬಗ್ಗೆ ಜನರೇ ತೀರ್ವಾನ ವಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಯಾರ ಜೊತೆಗೂ ಮೈತ್ರಿ ಇಲ್ಲ :2023ಕ್ಕೆ ಯಾರ ಜೊತೆಗೂ ಮೈತ್ರಿ ಇಲ್ಲ. 123 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. ಕರೊನಾ ಮುಗಿದ ನಂತರ ಒಂದು ವರ್ಷ ಪಕ್ಷ ಸಂಟನೆ ವಾಡುತ್ತೇವೆ. ರಾಜ್ಯಾದ್ಯಂತ ಪ್ರವಾಸ ವಾಡುತ್ತೇವೆ. ಜೆಡಿಎಸ್ ಮುಗಿದೇ ಹೋಯ್ತು ಎಂದವರಿಗೆ ಜನ ಉತ್ತರ ಕೊಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಒಕ್ಕಲಿಗರ ಸಂದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಮುಲ್ ವಾಜಿ ನಿರ್ದೇಶಕ ಎಸ್.ಲಿಂಗೇಶ್‌ಕುವಾರ್, ನಗರಸಭಾ ಅಧ್ಯಕ್ಷ ಪ್ರಶಾಂತ್, ನಗರಸಭಾ ಸದಸ್ಯ ಸತೀಶ್‌ಬಾಬು, ತಾಲೂಕು ಜೆಡಿಎಸ್ ವಾಜಿ ಅಧ್ಯಕ್ಷ ಟಿ.ಪಿ.ಪುಟ್ಟಸಿದ್ದೇಗೌಡ, ವಡ್ಡರಹಳ್ಳಿ ರಾಜಣ್ಣ, ಮುಖಂಡರಾದ ನಾಗವಾರ ರಂಗಸ್ವಾಮಿ, ಎ.ವಿ.ಹಳ್ಳಿ ಪ್ರಕಾಶ್, ಬಿಳಿಯಪ್ಪ, ಮುಕುಂದಾ ನಂದೀಶ್, ಮಹಿಳಾ ಟಕದ ಜಿಲ್ಲಾಧ್ಯಕ್ಷೆ ರೇಖಾ ಉವಾಶಂಕರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net