ಮಂಗಳೂರು: ನಗರದ ಹೊರ ವಲಯದ ತಲಪಾಡಿ ಪಡ್ಪು ಎಂಬಲ್ಲಿ ಶುಕ್ರವಾರ ರಾತ್ರಿ ಮನೆ ಮಂದಿ ಮಲಗಿದ್ದಾಗ ಮನೆ ಹೊತ್ತಿ ಉರಿದು ಅಪಾರ ಪ್ರಮಾಣ ಸೊತ್ತು ನಷ್ಟವಾಗಿದೆ.
ಇಲ್ಲಿನ ನಿವಾಸಿ ವಿನಯ ಕಮಾರ್ ಅವರ ಮನೆ ಬೆಂಕಿಗಾಹುತಿಯಾಗಿದೆ. ರಾತ್ರಿ ಶಬ್ದವಾಗಿ ಎದ್ದು ನೋಡಿದಾಗ ಮನೆ ಹೊತ್ತಿ ಉರಿಯುವುದು ಗಮನಕ್ಕೆ ಬಂದಿದೆ. ತಕ್ಷಣ ಅವರ ಪತ್ನಿ ಹಾಗೂ ಇಬ್ಬರು ಮಕ್ಕಳು ಓಡಿ ಹೊರ ಬಂದಿದ್ದಾರೆ.
ಮನೆಯೊಳಗಿದ್ದ ಪೀಠೋಪಕರಣ, ದಾಖಲೆ ಪತ್ರಗಳು, ಗೃಹ ಬಳಕೆ ಸೊತ್ತುಗಳು ಉರಿದು ಹೋಗಿದೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಬಗ್ಗೆ ವಿನಯ ಕುಮಾರ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.