ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇಸ್ರೋದಿಂದ ಹೊಸ ಮೈಲಿಗಲ್ಲು

ISRO
ಭಾರತದ ಬಾಹ್ಯಾಕಾಶ ರಂಗದಲ್ಲಿ ಹೊಸ ಹೆಜ್ಜೆಯನ್ನಿಡುತ್ತಿರುವ ಇಸ್ರೋ ಚಂದ್ರಯಾನ 3ರ ವಿಕ್ರಮ ಲ್ಯಾಂಡರ್ ಯಶಸ್ವಿಗಾಗಿ ಗಂಗಾವತಿ ಲಿಟಲ್ ಹಾರ್ಟ್ಸ್ ಸ್ಕೂಲ್ ಮೈದಾನದಲ್ಲಿ ಬೃಹತ್ ಚಿತ್ರ ಬರೆಯುವ ಮೂಲಕ ಬುಧವಾರ ಶುಭಕೋರಿದರು.
Published on

ಗಂಗಾವತಿ: ಭಾರತದ ಬಾಹ್ಯಾಕಾಶ ರಂಗದಲ್ಲಿ ಹೊಸ ಹೆಜ್ಜೆಯನ್ನಿಡುತ್ತಿರುವ ಇಸ್ರೋ ಚಂದ್ರಯಾನ 3ರ ವಿಕ್ರಮ ಲ್ಯಾಂಡರ್ ಯಶಸ್ವಿಗಾಗಿ ನಗರದ ಲಿಟಲ್ ಹಾರ್ಟ್ಸ್ ಸ್ಕೂಲ್‌ನಲ್ಲಿ ವಿಶೇಷ ಅಭಿಯಾನ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುತ್ತಿರುವ ಪ್ರಥಮ ನೌಕೆಯಾಗಿದ್ದು, ಅಪರೂಪದ ಕ್ಷಣಕ್ಕೆ ಇಡೀ ಭಾರತ ಸಾಕ್ಷಿಯಾಗಲಿದೆ. ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೈದಾನದಲ್ಲಿ ಚಂದ್ರಯಾನ-3ರ ನೌಕೆಯ ದೊಡ್ಡದಾದ ರಂಗೋಲಿಯಲ್ಲಿ ಚಿತ್ರ ಬರೆದು, ರಾಷ್ಟ್ರಧ್ವಜದೊಂದಿಗೆ ಯಶಸ್ವಿ ಕೋರಿ ಶುಭ ಹಾರೈಸಿದರು.

ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ ಮಾತನಾಡಿ, ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಗೆ ಇಸ್ರೋ ಸಜ್ಜಾಗಿದ್ದು, ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ ಎಂದರು. ಮುಖ್ಯ ಶಿಕ್ಷಕಿ ಎಂ.ಪ್ರಿಯಾಕುಮಾರಿ ಮತ್ತು ಶಿಕ್ಷಕ ಮತ್ತು ಶಿಕ್ಷಕರೇತ ಸಿಬ್ಬಂದಿಯಿದ್ದರು.

ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ:
ಇಸ್ರೋ ಚಂದ್ರಯಾನ ವಿಕ್ರಮ ಲ್ಯಾಂಡರ್ ಸುರಕ್ಷಿತ ಸ್ಪರ್ಶಕ್ಕಾಗಿ ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಲ್ಲಿ ಶ್ರೀ ಕೊಟ್ಟೂರೇಶ್ವರ ಸಂಯುಕ್ತ ಪ.ಪೂ.ಕಾಲೇಜಿನ ಪ್ರೌಢ ಶಾಲೆ ವಿಭಾಗದಿಂದ ವಿಶೇಷ ಅಭಿಯಾನ ಕೈಗೊಳ್ಳಲಾಯಿತು. ರಾಕೆಟ್ ಮಾದರಿಯಲ್ಲಿ ವಿದ್ಯಾರ್ಥಿಗಳು ಶಿಸ್ತನ್ನು ಪ್ರದರ್ಶಿಸಿದ್ದು, ರಾಷ್ಟ್ರಧ್ವಜ ಹಿಡಿಯುವ ಮೂಲಕ ಶುಭಕೋರಿದರು. ಉಪಪ್ರಾಚಾರ್ಯ ರಾಮನಗೌಡ, ಶಿಕ್ಷಕ ಶ್ರೀಧರ್, ಮುತ್ತನಗೌಡ ಸೇರಿ ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರಜ್ವಲ್, ಶ್ರುತಿ ಇತರರಿದ್ದರು.

ಸೇಂಟ್ ಪಾಲ್ಸ್ ಶಾಲೆ: ಇಸ್ರೋ ಚಂದ್ರಯಾನ 3ರ ವಿಕ್ರಮ ಲ್ಯಾಂಡರ್ ಯಶಸ್ವಿ ಸ್ಪರ್ಶಕ್ಕಾಗಿ ನಗರದ ಸೇಂಟ್ ಪಾಲ್ಸ್ ಸಿಬಿಎಸ್‌ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳು ರಾಕೆಟ್ ಚಿತ್ರ ಬರೆಯುವ ಮೂಲಕ ಶುಭಕೋರಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಕ್ಕಳು ಭಾಗವಹಿಸುವುದರ ಜತೆಗೆ ಯಶಸ್ವಿಗಾಗಿ ೋಷಣೆ ಕೂಗಿದರು. ಅಭಿಯಾನದ ಬಗ್ಗೆ ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಸರ್ವೇಶ ವಸದ್ ಮಾಹಿತಿ ನೀಡಿದರು. ಶಿಕ್ಷಕರು ಮತ್ತು ಶಿಕ್ಷಕರೇತ ಸಿಬ್ಬಂದಿಯಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net