ಮರ್ಜಾಪುರ ಎಚ್ಎಂ, ಶಿಕ್ಷಕನ ಮಧ್ಯೆ ಗಲಾಟೆ

Published on

ಬೀದರ್: ಮರ್ಜಾಪುರ(ಎಂ)ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಿಕ್ಷಕರ ಮಧ್ಯೆ ಗಲಾಟೆಯಾಗಿದೆ. ಬಿಸಿಯೂಟದ ಹಣ ಸಂಬಂಧ ಮುಖ್ಯಗುರು ಮತ್ತು ಶಿಕ್ಷಕನ ಮಧ್ಯೆ ಶುರುವಾದ ಕಿರಿಕಿರಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು ಎಂದು ಸ್ಥಳೀಯರು ದೂರಿದ್ದಾರೆ. ಮುಖ್ಯಗುರು ಮಡಯ್ಯಾ ಸ್ವಾಮಿ ಹಾಗೂ ಶಿಕ್ಷಕರೊಬ್ಬರ ನಡುವೆ ಶಾಲೆ ಆವರಣದಲ್ಲೇ ಗಲಾಟೆ ನಡೆದಿದೆ. ಸ್ಥಳೀಯರು ಘಟನೆ ವಿಡಿಯೋ ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದು, ವೈರಲ್ ಆಗಿದೆ. ವಿಷಯ ತಿಳಿಯುತ್ತಲೇ ಶಿಕ್ಷಣ ಇಲಾಖೆ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಗಲಾಟೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಮುಖ್ಯಗುರು ವರ್ತನೆ ಸರಿ ಇಲ್ಲ. ಗ್ರಾಮಸ್ಥರು ಹಾಗೂ ಶಿಕ್ಷಕರೊಂದಿಗೆ ಹೊಂದಾಣಿಕೆ ಇಲ್ಲ. ಬೇಜವಾಬ್ದಾರಿಯಾಗಿ ನಡೆದುಕೊಳ್ಳುತ್ತಾರೆ. ಈ ಹಿಂದೆಯೂ ಇಂಥ ಘಟನೆಗಳಲ್ಲಿ ಮುಖ್ಯಗುರು ಭಾಗಿಯಾಗಿದ್ದರು. ಸದ್ಯದ ಗಲಾಟೆ ಸಂಬಂಧ ಪರಿಶೀಲನೆ ನಡೆಸಿ ಕ್ರಮಕ್ಕೆ ಡಿಡಿಪಿಐಗೆ ವರದಿ ಸಲ್ಲಿಸುವುದಾಗಿ ಬಿಇಒ ಸೂರ್ಯಕಾಂತ ಮದಾನೆ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net