ಮರೆಯಾದ ಮುದ್ನಾಳ್ ಹುಲಿ

venkatareddy mudnal
Published on

ಯಾದಗಿರಿ: ದಿಟ್ಟ ನಡೆ ನುಡಿಯಿಂದಾಗಿ ಯಾದಗಿರಿ ಹುಲಿ ಎಂದೇ ಕರೆಸಿಕೊಳ್ಳುತ್ತಿದ್ದ ಬಿಜೆಪಿ ಹಿರಿಯ ಮುಖಂಡ, ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ್(೭೧) ಅನಾರೋಗ್ಯದಿಂದ ಮಂಗಳವಾರ ಮಧ್ಯಾಹ್ನ ೧೨.೨೨ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಪತ್ನಿ, ಪುತ್ರ, ಪುತ್ರಿ ಸೇರಿ ಅಪಾರ ಬಂಧು, ಅಭಿಮಾನಿಗಳನ್ನು ಅಗಲಿz್ದÁರೆ.

೧೯೫೪ರ ಮಾ.೨೮ರಂದು ಜನಿಸಿದ್ದ ಮಾಜಿ ಮಂತ್ರಿ, ಸ್ವಾತಂತ್ರÈ ಹೋರಾಟಗಾರರಾಗಿದ್ದ ದಿ.ವಿಶ್ವನಾಥರಡ್ಡಿ ಮುದ್ನಾಳ್ ಪುತ್ರರಾಗಿದ್ದ ವೆಂಕಟರಡ್ಡಿ ಅವರು ಕಲಬುರಗಿ ಎಸ್‌ಬಿ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ ಬಳಿಕ ಕೃಷಿ, ಉದ್ಯಮ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ದಿಟ್ಟ ವ್ಯಕ್ತಿತ್ವದವರಾಗಿದ್ದರೂ ಕರಣಾಮಯಿ ಆಗಿದ್ದರು. ೧೯೯೦ರ ದಶಕದಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಅವರು ೧೯೯೫ರಲ್ಲಿ ಯಾದಗಿರಿ ಪುರಸಭೆ ಅಧ್ಯಕ್ಷರಾಗಿದ್ದರು. ಶಾಸಕರಾಗಬೇಕೆಂಬ ಹಂಬಲದಿAದ ಗುರುಮಠಕಲ್ ಕ್ಷೇತ್ರದಿಂದ ಒಮ್ಮೆ ಪಕ್ಷೇತರ ಹಾಗೂ ಇನ್ನೊಮ್ಮೆ ಕೆಜಿಪಿಯಿಂದ ಸ್ಪರ್ಧಿಸಿ ಪರಾಭವಗೊಂಡರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ವೆಂಕಟರಡ್ಡಿ, ೨೦೧೮ರಲ್ಲಿ ಯಾದಗಿರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾದರು. ೨೦೨೩ರ ಚುನಾವಣೆಯಲ್ಲಿ ಸೋತರೂ ಸಕ್ರಿಯ ರಾಜಕಾರಣದಲ್ಲಿದ್ದರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಎಲ್ಲೆಡೆ ಪ್ರಚಾರ ಮಾಡಿದ್ದರು. ಇದಾದ ಕೆಲ ದಿನಗಳಲ್ಲಿ ಚಿಕಿತ್ಸೆಗೆಂದು ಹೋದವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕೆಲದಿನ ಹಿಂದೆ ಸಹೋದರ, ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್ ನಿಧನ ಹೊಂದಿದ್ದರು. ಅದೇ ನೋವಿನಲ್ಲಿದ್ದ ಪರಿವಾರ ವೆಂಕಟರಡ್ಡಿ ನಿಧನದಿಂದ ತೀವ್ರ ಆಘಾತಕ್ಕೆ ಒಳಗಾಗಿದೆ.

ವಿಷಯ ತಿಳಿಯುತ್ತಲೇ ಬೆಂಗಳೂರಿನ ಆಸ್ಪತ್ರೆಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಮಂತ್ರಿ ಸಿ.ಟಿ ರವಿ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net