ಮರೆಯಾಗುತ್ತಿರುವ ರಂಗಕಲೆ ಉಳಿಸುವ ಅಗತ್ಯ

klb1
ಸೇಡAನಲ್ಲಿ ನೃಪತುಂಗ ಹವ್ಯಾಸಿ ಕಲಾವಿದರ ನಾಟ್ಯ ಸಂಘದ 2ನೇ ವಾರ್ಷಿಕೋತ್ಸವದ ನಿಮಿತ್ತ ಕಲಾವಿದರಿಗೆ ರಂಗ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀಶಿವಶಂಕರ ಶಿವಾಚಾರ್ಯರು, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಶ್ರೀ ಶಾಂತಸೋಮನಾಥ ಶಿವಾಚಾರ್ಯರು ಇದ್ದರು.
Published on

ಸೇಡಂ: ಮೊಬೈಲ್, ಟಿವಿ ಹಾವಳಿಯಿಂದ ರಂಗ ಕಲೆ ಸೇರಿ ಗ್ರಾಮೀಣ ಸೊಗಡಿನ ಅನೇಕ ಕಲೆ ಕಣ್ಮರೆಯಾಗುತಿದ್ದು, ಅವನ್ನು ಉಳಿಸಿ, ಬೆಳೆಸಲು ಶ್ರಮಿಸಬೇಕು ಎಂದು ಹಾಲಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಹೇಳಿದರು.

ಪಟ್ಟಣದ ಸುವರ್ಣ ಕರ್ನಾಟಕ ಭವನದಲ್ಲಿ ಮಂಗಳವಾರ ನೃಪತುಂಗ ಹವ್ಯಾಸಿ ಕಲಾವಿದ ಸಂಘದ 2ನೇ ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ನಾಟಕೋತ್ಸ, ಕಲಾವಿದರಿಗೆ ರಂಗ ನೃಪತುಂಗ ಪ್ರಶಸ್ತಿ ಪ್ರದಾನ, ಪ್ರಗತಿಪರ ರೈತರಿಗೆ ವಿಶೇಷ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಆಧುನಿಕತೆಗೆ ಮಾರು ಹೋಗಿ, ಅತಿ ಹೆಚ್ಚು ಸಮಯ ಮೊಬೈಲ್‌ನಲ್ಲಿ ಕಳೆಯಲಾಗುತ್ತಿದೆ. ಇದರಿಂದ ನಾಟಕ, ದೊಡ್ಡಾಟ, ಜಾನಪದ ಸೇರಿ ಅನೇಕ ಕಲೆ ನಶಿಸುತ್ತಿವೆ. ಸಮಾಜದಲ್ಲಿನ ನಿಜ ಕಲ್ಪನೆ ಕಟ್ಟಿಕೊಡುವ ಶಕ್ತಿ ರಂಗಭೂಮಿ ಎಂದು ಹೇಳಿದರು.

ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ, ಮಳಖೇಡದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಟೆಂಗಳಿ-ಮAಗಲಗಿಯ ಶ್ರೀ ಶಾಂತಸೋಮನಾಥ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜೆಡಿಎಸ್ ನಾಯಕಿ ಸುನೀತಾ ತಳವಾರ, ಬಿಜೆಪಿ ಮುಖಂಡ ಓಂಪ್ರಕಾಶ ಪಾಟೀಲ್, ಸತೀಶ ಬಾಂಜಿ ಊಡಗಿ, ರವಿ ಸಾಹುಕಾರ, ಅಶೋಕ ಪವಾರ, ಭಗವಂತರಾವ ಪಾಟೀಲ್, ಶರಣಪ್ಪ ಹೂಗಾರ ಇತರರಿದ್ದರು.

ಜಿಲ್ಲೆಯ ವಿವಿಧ ಕ್ಷೇತ್ರದ 25 ಕಲಾವಿದ ಹಾಗೂ ಕಲಾ ಪೋಷಕರಿಗೆ ರಂಗ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. 25 ಪ್ರಗತಿಪರ ರೈತರಿಗೆ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಶಂಕರ ಹೂವಿನಹಿಪ್ಪರಗಿ ಅವರನ್ನು ಸತ್ಕರಿಸಲಾಯಿತು. ಕವಿ ವೀರಯ್ಯಸ್ವಾಮಿ ಮಠಪತಿ ರಚಿತ ಸ್ನೇಹನಾ ಪ್ರೀತಿನಾ ನಾಟಕ ಪ್ರದರ್ಶನಗೊಂಡಿತು. ಸAಘದ ಸಂರಕ್ಷಕ ಶಿವಯ್ಯಸ್ವಾಮಿ ಬಿಬ್ಬಳ್ಳಿ ಪ್ರಾಸ್ತವಿಕ ಮಾತನಾಡಿದರು. ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net