ಮರೆಗುಳಿತನ ಮಾಸಾಚರಣೆಗೆ ಚಾಲನೆ

52432a5c-33a0-42cb-81ff-120d919f6290
Published on

ಮೈಸೂರು: ಭಾರತೀಯ ಮರೆಗುಳಿತನ ಮತ್ತು ಸಂಬಂಧಿತ ಕಾಯಿಲೆಗಳ ಸಂಸ್ಥೆ(ಎಆರ್‌ಡಿಎಸ್‌ಐ) ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ವಿಶ್ವ ಅಲ್ಜೈಮರ್(ಮರೆಗುಳಿತನ) ಮಾಸಾಚರಣೆ ಕಾರ್ಯಕ್ರಮಕ್ಕೆ ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು.

ರೋಟರಿ ಮೈಸೂರು ವಲಯಾಧ್ಯಕ್ಷ ಕೆ.ಸುಬ್ರಹ್ಮಣ್ಯರಾವ್ ಮಾತನಾಡಿ, ಮರೆಗುಳಿತನದ ಅರಿವು ಮೂಡಿಸುವ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಎಆರ್‌ಡಿಎಸ್‌ಐ ಜಿಲ್ಲಾಧ್ಯಕ್ಷ ಡಾ. ಹನುಮಂತಾಚಾರ್ ಜೋಷಿ ಮಾತನಾಡಿ, ಸೆ.13ರ ಬೆಳಗ್ಗೆ 10ಕ್ಕೆ ಚಾಮುಂಡಿಬೆಟ್ಟದಲ್ಲಿ ‘ನಮ್ಮ ನಡಿಗೆ, ಆರೋಗ್ಯದೆಡೆಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 15ರ ಬೆಳಗ್ಗೆ 10ಕ್ಕೆ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ‘ನಾವು ನಮ್ಮ ನೆನಪುಗಳು’ ವಿಚಾರ ಸಂಕಿರಣ ಜರುಗಲಿದೆ. 19ರಂದು ರೇಡಿಯೋ ಮತ್ತು ದೃಶ್ಯ ಮಾಧ್ಯಮದಲ್ಲಿ ಸೆಲಿಬ್ರಿಟಿಗಳೊಂದಿಗೆ ಸಂವಾದವಿದೆ ಎಂದು ಮಾಹಿತಿ ನೀಡಿದರು.

21ರ ಬೆಳಗ್ಗೆ 9ಕ್ಕೆ ನಗರದ ಕೋಟೆ ಅಂಜನೇಯ ದೇವಸ್ಥಾನದ ಬಳಿ ಮೆಮೋರಿಯಲ್ ವಾಕ್, 27ರ ಬೆಳಗ್ಗೆ 9ಕ್ಕೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಕಾರ್ಯಾಗಾರ, 28ರ ಬೆಳಗ್ಗೆ 11ಕ್ಕೆ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ‘ನೆನಪಿನ ಯೋಗ: ಸ್ಮರಣಶಕ್ತಿ ಸುಧಾರಿಸಲು ಯೋಗ ಕಲಿಕೆ’ ಮತ್ತು ಸಮಾರೋಪ ನಡೆಯಲಿದೆ ಎಂದವರು ಮಾಹಿತಿ ನೀಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲರೂ ವ್ಯಾಟ್ಸ್‌ಆ್ಯಪ್, ಅಂತರ್ಜಾಲ, ಕಂಪ್ಯೂಟರ್‌ನಲ್ಲೇ ಮುಳುಗಿರುತ್ತಾರೆ. ಹೀಗಾಗಿ ಈ ರೋಗಿಗಳ ಬಗ್ಗೆ ಕಾಳಜಿ ಕಡಿಮೆ ಆಗುತ್ತಿದೆ ಎಂದರು. ಡಾ. ಪ್ರತಿಭಾ, ರವಿ ಶಿರಹಟ್ಟಿ, ಎನ್. ಚಂದ್ರಶೇಖರ್, ಶ್ರೀಗಣೇಶ್ ಹಾಗೂ ಗಣೇಶ್‌ರಾವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net