ಮರುಕುಂಡಿ ದಲಿತರ ಪ್ರಕರಣ:98 ಜನರಿಗೆ ಜೀವವಾಧಿ ಶಿಕ್ಷೆ ತೀರ್ಪುಗೆ ಸ್ವಾಗತ

ಮರುಕುಂಡಿ ದಲಿತರ ಪ್ರಕರಣ:98 ಜನರಿಗೆ ಜೀವವಾಧಿ ಶಿಕ್ಷೆ ತೀರ್ಪುಗೆ ಸ್ವಾಗತ
Published on

ಹಾಸನ: ಕೊಪ್ಪಳ ಜಿಲ್ಲೆ ಮರುಕುಂಡಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 98 ಜನರಿಗೆ ಜೀವವಾಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪುನ್ನು ಸ್ವಾಗತಿಸಿ ಮಾನವ ಬಂಧುತ್ವ ವೇದಿಕೆ, ದಲಿತ ಸಂಘಟನೆಗಳ ಒಕ್ಕೂಟದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ದಲಿತ ಮುಖಂಡರು ಎಚ್.ಕೆ.ಸಂದೇಶ್ ಮಾತನಾಡಿ, ಗಂಗಾವತಿ ತಾಲ್ಲೂಕಿನ ಮರುಕುಂಡಿ ಗ್ರಾಮದಲ್ಲಿ 2014 ಏಪ್ರಿಲ್ 28 ರಂದು ಪುನಿತ್ ರಾಜಕುಮಾರ್ ಅವರ ಪವರ್ ಸಿನಿಮಾ ಟಕೆಟ್ ತೆಗೆದುಕೊಳ್ಳುವ ಕಾರಣಕ್ಕೆ ಅಲ್ಲಿನ ದಲಿತರ ಮಧ್ಯೆ ಜಗಳವಾಗಿ ನಂತರದಲ್ಲಿ ಸವರ್ಣಿಯರನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಅಂದು ಇಡೀ ದಿನ ಮಾದಿಗ, ದಲಿತರ 60 ಗುಡಿಸಲನ್ನು ಸುಟ್ಟು ಹಾಕಲಾಗಿತ್ತು. ನಂತರ ಪೊಲೀಸ್ ಠಾಣೆಗೆ ದಲಿತರು ದೂರು ನೀಡಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸುಮಾರು 117 ಜನರ ಮೇಲೆ ದೂರು ದಾಖಲಾಗಿತ್ತು. ಇವರಲ್ಲಿ 17 ಜನರು ಈಗಾಗಲೇ ಸಾವನಪ್ಪಿದ್ದಾರೆ. ಉಳಿಕೆ 98 ಜನರ ಮೇಲೆ ಜೀವವಾಧಿ ಶಿಕ್ಷೆ ನೀಡಲಾಯಿತು. ಇಂತಹ ಕ್ರಾಂತಿಕಾರಿ ತೀರ್ಪು ಎಲ್ಲಿ ಕೂಡ ಬಂದಿರುವುದಿಲ್ಲ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ದಲಿತ ಮುಖಂಡ ಕೃಷ್ಣದಾಸ್ ಮಾತನಾಡಿ, ಕೊಪ್ಪಳ ಜಿಲ್ಲೆ ಮರುಕುಂಡಿ ಗ್ರಾಮದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ನ್ಯಾಯಾಲಯ ತೀರ್ಪು ನೀಡಿರುವುದನ್ನು ಸ್ವಾಗತ ಮಾಡುತ್ತೇವೆ. ದಲಿತರಿಗೆ ನ್ಯಾಯ ಒದಗಿಸಿದಂತಹ ನ್ಯಾಯಾಲಯ ಸಂವಿಧಾನವನ್ನ ಎತ್ತಿ ಹಿಡಿದಿದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗಿದೆ ಎಂದರು.

ಒಕ್ಕೂಟ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಉಳುವಾರೆ, ಕೆ.ಈರಪ್ಪ, ರಂಗಸ್ವಾಮಿ ದಲಿತ ಮುಖಂಡರು ಗೋವಿಂದ್ ರಾಜ್, ಅಂಬುಗ ಮಲ್ಲೇಶ್, ಈರೇಶ್ ಈರಳ್ಳಿ, ಗೋವಿಂದರಾಜು, ನಗರಸಭೆ ಸದಸ್ಯ ಕ್ರಾಂತಿ ಪ್ರಸಾದ್ ತ್ಯಾಗಿ, ವಕೀಲ ಯೋಗೀಶ್, ಕೆ.ಪ್ರಕಾಶ್, ಜಗದೀಶ್ ಚೌಡಳ್ಳಿ, ಹರೀಶ್ ಕಟ್ಟೆಬೆಳಗೊಳಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net