ಮರು ಬಳಕೆ ವಸ್ತುಗಳನ್ನು ಸಂಗ್ರಹಣಾ ಕೇಂದ್ರಕ್ಕೆ ನೀಡಿ

20 HANUR 2
Published on

ಹನೂರು: ಮರು ಬಳಕೆಗೆ ಯೋಗ್ಯವಾದ ವಸ್ತುಗಳನ್ನು ಕಸವನ್ನಾಗಿಸದೇ ಸಂಗ್ರಹಣಾ ಕೇಂದ್ರಕ್ಕೆ ನೀಡುವುದರ ಮೂಲಕ ಪಟ್ಟಣದ ಸ್ವಚ್ಛತೆಗೆ ಸಹರಿಸಬೇಕು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದರು.


ಪ.ಪಂ.ನ ವಾಣಿಜ್ಯ ಮಳಿಗೆಯ ಕೊಠಡಿಯಲ್ಲಿ ಶನಿವಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ‘ನನ್ನ ಜೀವನ, ನನ್ನ ಸ್ವಚ್ಛ ನಗರ’ ಕಾರ್ಯಕ್ರಮದ ಅಂಗವಾಗಿ ಪುನರ್‌ಬಳಕೆ ವಸ್ತುಗಳ ಸಂಗ್ರಹಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಮನೆಗಳಲ್ಲಿ ಮರು ಬಳಕೆಗೆ ಬರುವ ಬಟ್ಟೆ, ಆಟಿಕೆ ವಸ್ತು, ಚಪ್ಪಲಿ, ದಿನಪತ್ರಿಕೆ, ಪುಸ್ತಕಗಳು, ಪ್ಲಾಸ್ಟಿಕ್ ಚೀಲಗಳು, ಎಲೆಕ್ಟ್ರಾನಿಕ್ ಹಾಗೂ ಇನ್ನಿತರೆ ವಸ್ತುಗಳನ್ನು ಕಸವನ್ನಾಗಿಸಿ ಬಿಸಾಡುತ್ತಾರೆ.

ಇದರಿಂದ ಪಟ್ಟಣದ ಸ್ವಚ್ಛತೆಯ ಮೇಲೆ ದುಷ್ಪಾರಿಣಾಮ ಬೀರಲಿದೆ. ಹಾಗಾಗಿ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಬ್ದಾರಿ. ಈ ದಿಸೆಯಲ್ಲಿ ಸಂಗ್ರಹಣಾ ಕೇಂದ್ರವನ್ನು ತೆರೆಯಲಾಗಿದ್ದು, ಜೂ.5ರವೆರೆಗೆ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯನಿರ್ವಹಿಸಲಿದೆ. ಜನತೆ ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.


ಪ.ಪಂ. ಮುಖ್ಯಾಧಿಕಾರಿ ಮಹೇಶ್‌ಕುಮಾರ್ ಮಾತನಾಡಿ, ಪಟ್ಟಣದ ಜನತೆ ಹಳೆಯ ವಸ್ತುಗಳನ್ನು ಬಿಸಾಡದೇ ಸಂಗ್ರಹಣಾ ಕೇಂದ್ರಕ್ಕೆ ದೇಣಿಗೆ ನೀಡಬೇಕು. ಈ ವೇಳೆ ಪ್ರಮಾಣ ಪತ್ರದ ಜತೆಗೆ ನೀಡಿರುವ ವಸ್ತುಗಳಿಗೆ ಪರ್ಯಾಯವಾಗಿ ಸ್ಟೇಷನರಿ ಸಮಾಗ್ರಿ, ಸಾವಯವ ಗೊಬ್ಬರ, ಲೇಖನ ಸಾಮಾಗ್ರಿ ಹಾಗೂ ಪುಸ್ತಕವನ್ನು ನೀಡಲಾಗುವುದು ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಗಿರೀಶ್, ಸುದೇಶ್, ಮಹೇಶ್, ಮಹೇಶ್‌ನಾಯ್ಕ, ಆರೋಗ್ಯಾಧಿಕಾರಿ ಭೂಮಿಕಾ, ಪ್ರಭಾರ ಕಂದಾಯ ನಿರೀಕ್ಷಕ ಮಂಜುನಾಥ್, ನೌಕರರಾದ ಮಾದೇಶ್, ನಾಗೇಂದ್ರ, ಮದನ್, ಪ್ರತಾಪ್, ಶ್ರೀನಿವಾಸ್, ರಾಕೇಶ್, ಸುರೇಶ್, ಕೆಂಪರಾಜು ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net