ಮರಿಯಾ ಮಾತೆ ಜಯಂತಿ

14vpt -02
Published on

ವಿರಾಜಪೇಟೆ : ಪ್ರತಿಯೊಬ್ಬರಲ್ಲೂ ಅಡಗಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕು ಎಂದು ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಫಾದರ್ ದಯಾನಂದ ಪ್ರಭು ಹೇಳಿದರು.
ಸಂತ ಅನ್ನಮ್ಮ ದ್ವಿಶತಮಾನೋತ್ಸವ ಭವನದಲ್ಲಿ ಮರಿಯಾ ಮಾತೆ ಜಯಂತಿ ಅಂಗವಾಗಿ ಕ್ರೈಸ್ತ ಸ್ನೇಹಿತರ ಸಂಘ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು. ಸಹಾಯಕ ಧರ್ಮಗುರು ಯೇಸು ಪ್ರಸಾದ್ ಮಾತನಾಡಿ, ನಮ್ಮ ಸುತ್ತಮುತ್ತ ಇರುವ ಪ್ರತಿಭಾವಂತರನ್ನು ನಾವೇ ಗುರುತಿಸಿ ಪ್ರೋತ್ಸಾಹಿಸಬೇಕು. ಅದಕ್ಕೆ ವೇದಿಕೆಗಳನ್ನೂ ಕಲ್ಪಿಸಿ ಕೊಡಬೇಕು ಎಂದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಫ್ರಾನ್ಸಿಸ್ ಲೋಬೊ, ಉಪಾಧ್ಯಕ್ಷ ನಿಕ್ಸನ್ ಡಿಸೋಜಾ, ಸಾಂಸ್ಕೃತಿಕ ಕಾರ್ಯದರ್ಶಿ ಡೇನಿಯಲ್ ಸಾಲ್ಡಾನಾ, ಸಂಘದ ಮಾಜಿ ಅಧ್ಯಕ್ಷ ಇ.ಪಿ. ನೆಲ್ಸನ್ ಇತರರು ಇದ್ದರು. ವಿವಿಧ ವಿಭಾಗಗಳಲ್ಲಿ ಛದ್ಮವೇಷ, ಸಮೂಹಗಾಯನ, ದೇಶ ಭಕ್ತಿಗೀತೆ ಸ್ಪರ್ಧೆಗಳು ಆಯೋಜನೆಗೊಂಡಿದ್ದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net