ಮರಿಬಸವಲಿಂಗ ತಾತ ಜಾತ್ರೆ ಅದ್ದೂರಿ

9SND-05
Published on

ಸಿಂಧನೂರು: ಉಪ್ಪಲದೊಡ್ಡಿಯಲ್ಲಿ ಮರಿಬಸವಲಿಂಗ ತಾತನ ಜಾತ್ರೆ, ಶ್ರೀ ಮಾರುತೇಶ್ವರ ಕಾರ್ತಿಕೋತ್ಸವ ಅಂಗವಾಗಿ ಶನಿವಾರ ವಿಜೃಂಭಣೆಯಿಂದ ರಥೋತ್ಸವ ನಡೆಯಿತು.

ಶುಕ್ರವಾರ ಬೆಳಗ್ಗೆ ಮರಿಬಸವಲಿಂಗ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ನೆರವೇರಿಸಲಾಯಿತು. ಸಂಜೆ ಉಚ್ಛಾಯ ಸೇವೆ ಜರುಗಿತು. ಶನಿವಾರ ಬೆಳಗ್ಗೆ ಶ್ರೀ ಮಾರುತೇಶ್ವರ ಮೂರ್ತಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಎಲೆ ಅರ್ಚನೆ ಸೇರಿ ಇತರ ಪೂಜಾ ಕೈಂಕರ್ಯಗಳು ನೆರವೇರಿದವು. ನಂತರ ಧಾರ್ಮಿಕ ಧ್ವಜಾರೋಹಣ ಹಾಗೂ ಕಲಶಾರೋಹಣ, ಸುಮಂಗಲೆಯರಿಂದ ಕುಂಭೋತ್ಸವ ನಡೆಯಿತು. ಗ್ರಾಮದ ದೇವತೆಯರಿಗೆ ಉಡಿ ತುಂಬಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net