ಮರಾಠಾ ಸಮಾಜಕ್ಕೆ ಸಮುದಾಯ ಭವನ ನಿರ್ವಿುಸಲಿ

27-klg 3
Published on

ಕಲಘಟಗಿ: ಅತಿ ಹೆಚ್ಚು ಮರಾಠಾ ಸಮುದಾಯ ಹೊಂದಿದ ಕಲಘಟಗಿ ಕ್ಷೇತ್ರದಲ್ಲಿ ಸಮಾಜದ ಕಾರ್ಯಕ್ರಮ ಮಾಡಲು ಉತ್ತಮ ಸಭಾಭವನ ಇಲ್ಲದಿರುವುದರು ಖೇದಕರ ಎಂದು ಗೋಸಾಯಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಮಂಜುನಾಥ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದಕ್ಕೆ ಶನಿವಾರ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಶಾಸಕರಾದ ಸಂತೋಷ ಲಾಡ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗೆಲುವಿಗೆ ಕಲಘಟಗಿ ಕ್ಷೇತ್ರದ ಮರಾಠಾ ಸಮಾಜದವರ ಆಶೀರ್ವಾದವಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಮರಾಠಾ ಸಮುದಾಯ ಭವನ ನಿರ್ವಿುಸಬೇಕು ಎಂದು ಒತ್ತಾಯಿಸಿದರು.

ಫಕೀರೇಶ ನೇಸರೇಕರ, ಪರಶುರಾಮ್ ತಹಶೀಲ್ದಾರ್, ರಾಘವೇಂದ್ರ ಹುಲಿಹೊಂಡ, ಹರೀಶ ಗುಡಿಯಾಳ, ಅಣ್ಣಪ್ಪ ಗುಡಿಯಾಳ, ಜ್ಯೋತಿಬಾ ಹುಲಕೊಪ್ಪ, ಸಾತಪ್ಪ ಮಾಂಗಲಿ, ಪತ್ರಕರ್ತ ರಮೇಶ ಸೋಲಾರಗೊಪ್ಪ, ಕಲ್ಲಪ್ಪ ಮಿರ್ಜಿ, ಸುನೀಲ ಕಮ್ಮಾರ, ಪ್ರಕಾಶಧೂಪದ, ಸಾತಪ್ಪ ಕುಂಕೂರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net