ಮರಾಠಾ ಪ್ರಾಧಿಕಾರ ಹಿಂಪಡೆಯಿರಿ

KARVE Protest
Published on

ಬೀದರ್: ಸರ್ಕಾರ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯ) ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.

ಇಲ್ಲಿಯ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡದ ಸರ್ಕಾರ ಇದೀಗ ಕನ್ನಡಿಗರ ವಿರುದ್ಧ ಸದಾ ಹೇಳಿಕೆ ನೀಡಿ ಜಗಳ ಕೆದಕುವ ಮರಾಠಿಗರ ಸಂಬಂಧ ಪ್ರಾಧಿಕಾರ ರಚನೆ ಮಾಡಿದ್ದು ಸರಿಯಲ್ಲ. ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಬೆಳಗಾವಿ ಲೋಕಸಭಾ, ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಮರಾಠಾ ಸಮಾಜದ ಮತ ಪಡೆಯುವ ಉದ್ದೇಶದಿಂದ ಸರ್ಕಾರ ಪ್ರಾಧಿಕಾರ ರಚನೆ ಮಾಡಿರುವುದು ಸರಿಯಲ್ಲ. ಈ ಆದೇಶ ಕೂಡಲೇ ರದ್ದುಪಡಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಬೇಡಿಕೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಬರೆದ ಮನವಿಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ವೇದಿಕೆ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪ, ಪ್ರಮುಖರಾದ ಇಮ್ಯಾನುವೆಲ್ ಮಂದಕನಳ್ಳಿ, ಸೈಮನ್ ಚಿಲ್ಲರ್ಗಿ, ರಾಜಶೇಖರ ಹಲ್ಮಡಗೆ, ಜಗನ್ನಾಥ ಕೌಠಾ, ಅಶೋಕ ವಗ್ಗೆ, ಪ್ರಶಾಂತ ಸೂರ್ಯವಂಶಿ, ಪ್ರದೀಪ ಕೋಟೆ, ಜೆ.ಪಿ. ಜೈಸನ್ ಮೋಡಿ, ಮಹೇಂದ್ರಕುಮಾರ ಮೇತ್ರೆ, ಪ್ರಶಾಂತ ಗುತ್ತೆದಾರ, ಗುರುರಾಜ ಮೇತ್ರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net