ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕೈಬಿಡಿ

karave
Published on

ಬೀದರ್: ಮರಾಠಾ ಅಭಿವೃದ್ಧಿ ಪ್ರಾಧಿಕಾರ ಕೈಬಿಡಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಸಾರಥ್ಯ) ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿತು. ಅಂಬೇಡ್ಕರ್ ವೃತ್ತದಿಂದ ಡಿಸಿ ಕಚೇರಿಯವರೆಗೆ ರ್ಯಾಲಿ ನಡೆಸಿ, ಸದಾ ಕ್ಯಾತೆ ತೆಗೆಯುವ ಮರಾಠಾ ಸಮುದಾಯದ ಸಂಬಂಧ ನಿಗಮ ಸ್ಥಾಪಿಸಿರುವುದು ಸರಿಯಲ್ಲ. ಕೂಡಲೇ ಇದನ್ನು ತಡೆಹಿಡಿಯಲು ಆಗ್ರಹಿಸಿದರು.ಬೇಡಿಕೆ ಸಂಬಂಧ ಸಿಎಂ ಅವರಿಗೆ ಬರೆದ ಮನವಿಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಿ, ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಗಿದೆ. ವೇದಿಕೆ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪ ನೇತೃತ್ವದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಪ್ರಮುಖರಾದ ಸೈಮನ್ ಚಿಲ್ಲರ್ಗಿ, ಜಗನ್ನಾಥ ಕೌಠಾ, ರಾಜಶೇಖರ ಹಲ್ಮಡಗೆ, ಗುರುರಾಜ ಮೇತ್ರೆ, ಅಶೋಕ ವಗ್ಗೆ, ಪ್ರಶಾಂತ ಸೂರ್ಯವಂಶಿ, ಪ್ರದೀಪ ಕೋಟೆ, ಸ್ವಾಮಿದಾಸ ಸೊರಳ್ಳಿಕರ್, ಮಹೇಂದ್ರಕುಮಾರ ಮೇತ್ರೆ, ಯುನೂಸ್, ಇಮ್ಯಾನುವೆಲ್ ಮಂದಕನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net