

ಬಸವಕಲ್ಯಾಣ: ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಮರಾಠ ಸಮಾದವರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಸಮಾಜದ ಪ್ರಮುಖರು ಒತ್ತಾಯಿಸಿದರು.
ನಗರದ ವರ್ಷಾ ಫಂಕ್ಷನ್ ಹಾಲ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಪ್ರಮುಖರು, ಬೀದರ್ ಜಿಲ್ಲೆಯಲ್ಲಿ ಮರಾಠ ಸಮಾಜದ ಮೂರು ಲಕ್ಷ ಮತದಾರರಿದ್ದಾರೆ. ಸಮಾಜದ ಮತಗಳು ನಿರ್ಣಾಯಕವಾಗಿವೆ. ಸಮಾಜದವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ, ವಕೀಲ ನಾರಾಯಣ ಗಣೇಶ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಕಾಶ ಪಾಟೀಲ್ ಸೇರಿ ಸಮಾಜದ ಮುಖಂಡರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಆನಂದ ಪಾಟೀಲ್ ಮನವಿ ಮಾಡಿದ್ದಾರೆ.
ಪ್ರಮುಖರಾದ ಅಂಗದರಾವ ಜಗತಾಪ, ದತ್ತಾತ್ರೇಯ ಧೂಳೆ ಪಾಟೀಲ್, ಬಾಲಾಜಿ ಚಂಡಕಾಪುರೆ, ವಿಕ್ರಮ ಪಾಟೀಲ್, ಅಜಿಂಕ್ಯ ಮುಳೆ, ಧನರಾಜ ಪಡೆ ಇತರರಿದ್ದರು.