ಮರಾಠ ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭಿಸಿ

Maratha
Published on

ಬೀದರ್: ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮರಾಠ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳನ್ನು ಆರಂಭಿಸಬೇಕು ಎಂದು ಸಕಲ ಮರಾಠ ಸಮಾಜ ಕ್ರಾಂತಿ ಮೋರ್ಚಾ ಆಗ್ರಹಿಸಿದೆ.

ಶನಿವಾರ ನಗರಕ್ಕೆ ಆಗಮಿಸಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್.ರಘು ಅವರಿಗೆ ಮನವಿಪತ್ರ ಸಲ್ಲಿಸಿದ ಪ್ರಮುಖರು, ವಸತಿನಿಲಯ ಆರಂಭಿಸುವುದರ ಜತೆಗೆ ಕರ್ನಾಟಕ ಲೋಕಸೇವಾ ಆಯೋಗ, ನಿಗಮ ಮಂಡಳಿ ಅಧ್ಯಕ್ಷ ಹಾಗೂ ನಿರ್ದೇಶಕ ಸ್ಥಾನಗಳಲ್ಲಿ ಮರಾಠ ಸಮಾಜದವರಿಗೆ ಪ್ರಾತಿನಿಧ್ಯ ನೀಡಬೇಕು. ಸಮಾಜವನ್ನು 3ಬಿಯಿಂದ 2ಎಗೆ ಸೇರಿಸಬೇಕು ಎಂದು ಮೋರ್ಚಾ ಜಿಲ್ಲಾ ಸಂಯೋಜಕ ವೆಂಕಟೇಶರಾವ ಮಾಯಿಂದೆ, ಸೂರಜ್ ಜಾಧವ್, ವಿದ್ಯಾವಾನ ಪಾಟೀಲ್, ಪೀರಾಜಿರಾವ ಬಿರಾದಾರ, ಸುರೇಶ ಟಾಕಳೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net