ಮರಳು ಸಾಗಿಸುತ್ತಿದ್ದವನ ಬಂಧನ

9kglphoto-2,
ಪೊಲೀಸರು ದಾಳಿ ನಡೆಸಿದ್ದು 4 ಎತ್ತಿನ ಗಾಡಿ, ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.
Published on

ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುತ್ತಿದ್ದ ವೇಳೆ ತಾಲೂಕಿನ ಹೊಸ ಹಂಪಾಪುರ ಗ್ರಾಮದ ಕಾಲುವೆ ರಸ್ತೆ ಬಳಿ ಪೊಲೀಸರು ದಾಳಿ ನಡೆಸಿದ್ದು 4 ಎತ್ತಿನ ಗಾಡಿ, ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಹೊಸ ಹಂಪಾಪುರ ಗ್ರಾಮದ ಕೃಷ್ಣ ಬಂಧಿತನಾಗಿದ್ದು, ರಂಗಸ್ವಾಮಿ, ಮಹೇಶ್, ಶಾಂತರಾಜು ತಪ್ಪಿಸಿಕೊಂಡವರಾಗಿದ್ದಾರೆ.

ಕಾವೇರಿ ನದಿಯಲ್ಲಿ ಅಕ್ರಮವಾಗಿ ಮರಳು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಪಟ್ಟಣ ಪಿಎಸ್‌ಐ ಮಹೇಶ್ ಕುಮಾರ್ ತಂಡ ಭಾನುವಾರ ಮುಂಜಾನೆ ಸುಮಾರು 4.30 ಗಂಟೆಯಲ್ಲಿ ದಾಳಿ ನಡೆಸಿದೆ. ಎತ್ತುಗಳ ಸಮೇತ ಮರಳು ತುಂಬಿದ ಗಾಡಿಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಪಟ್ಟಣ ಪೊಲೀಸರು ಚಾಮರಾಜನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ವರದಿ ಸಲ್ಲಿಸಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದು ಕೊಳ್ಳುವಂತೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net