ಮರಳು ಸಾಗಣೆ ಮಾಡುತ್ತಿದ್ದವರ ಬಂಧನ

3kglphoto-2,maralu
Published on


ಕೊಳ್ಳೇಗಾಲ: ಪಟ್ಟಣದ ಹೊಸ ಹಂಪಾಪುರ ಚಾನೆಲ್ ರಸ್ತೆಯಲ್ಲಿ ಎತ್ತಿನ ಗಾಡಿಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಉಪ್ಪಾರ ಮೋಳೆ ನಿವಾಸಿ ಮಹೇಶ್, ಹೊಸ ಹಂಪಾಪುರ ಗ್ರಾಮದ ಕುಮಾರ್ ಬಂಧಿತರು. ಕಾವೇರಿ ನದಿಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಎರಡು ಎತ್ತಿನ ಗಾಡಿಗಳಲ್ಲಿ ಸಾಗಣೆ ಮಾಡುತ್ತಿದ್ದರು. ಈ ವೇಳೆ ಪಟ್ಟಣ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದರು. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಕ್ರಮ ವಹಿಸುವಂತೆ ವರದಿ ಸಲ್ಲಿಸಿದರು. ನಂತರ ಇಬ್ಬರನ್ನು ಬಿಡುಗಡೆ ಮಾಡಿ ವಶಕ್ಕೆ ಪಡೆದಿದ್ದ ಎತ್ತುಗಳನ್ನು ಮಾಲೀಕರಿಗೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net