ಮರಳು ಸಾಗಣೆ ತಡೆಗೆ ಟ್ರಂಚ್ ನಿರ್ಮಾಣ

kpp trunch
ಹರಿಹರಿಪುರ ಸಮೀಪದ ಹೊಳೆಹೊದ್ದುವಿನಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಪೊಲೀಸ್ ಇಲಾಖೆಯ ವತಿಯಿಂದ ಟ್ರಂಚ್ ನಿರ್ಮಾಣ ಮಾಡಿರುವುದು.
Published on

ಕೊಪ್ಪ: ಮರುಳು ದಂಧೆ ತಡೆಯುವ ನಿಟ್ಟಿನಲ್ಲಿ ಹರಿಹರಪುರ ಪೊಲೀಸರು ಎಚ್ಚೆತ್ತುಕೊಂಡಿದ್ದು, ಕೆಲವು ಪ್ರದೇಶಗಳಲ್ಲಿ ಹೊಳೆ ದಾಟದಂತೆ ಟ್ರಂಚ್ ನಿರ್ಮಿಸಿದ್ದಾರೆ.

ಹರಿಹರಪುರ ಸಮೀಪದ ಹೊಳೆಹೊದ್ದು, ಕಾರಂಗಿ, ಗುರುಕುಲ ಸಮೀಪದ ತೂಗು ಸೇತುವೆ ಬಳಿ ಮರಳು ಸಾಗಿಸಲಾಗುತ್ತಿತ್ತು. ಈ ಕುರಿತು ವಿಜಯವಾಣಿ ತುಂಗಾ ನದಿಯಲ್ಲಿ ಮರಳು ಮಾಫಿಯಾ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಇಲಾಖೆಯನ್ನು ಎಚ್ಚರಿಸುವ ಕಾರ್ಯ ಮಾಡಿತ್ತು. ಈಗ ಪೊಲೀಸರು ಎಚ್ಚೆತ್ತುಕೊಂಡಿದ್ದು ಕಾರಂಗಿ, ಹೊಳೆಹೊದ್ದು, ಗುರುಕುಲ ಸಮೀಪದ ತೂಗು ಸೇತುವೆ ಬಳಿ ಜೆಸಿಬಿಯಿಂದ ದೊಡ್ಡ ಟ್ರಂಚ್‌ಗಳನ್ನು ತೆರೆದು ಲಾರಿ, ಪಿಕಪ್‌ಗಳು ನದಿಗೆ ತೆರಳಿ ಮರಳು ತೆಗೆಯುವುದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ.

ಹರಿಹರಪುರ ಭಾಗದಲ್ಲಿ ಮರಳು ದಂಧೆಗೆ ಪೊಲೀಸರು ಬ್ರೇಕ್ ಹಾಕುತ್ತಿಲ್ಲ. ರಾತ್ರಿ ವೇಳೆಯಲ್ಲಿ ಸಾಗಾಟ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಪೊಲೀಸ್ ಇಲಾಖೆಯ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಡಿವೈಎಸ್‌ಪಿ ಬಾಲಾಜಿ ಸಿಂಗ್ ನೇತತ್ವದಲ್ಲಿ ಮೂರ‌್ನಾಲ್ಕು ಸ್ಥಳಗಳಲ್ಲಿ ಟ್ರಂಚ್ ನಿರ್ಮಾಣ ಮಾಡಿದ್ದಾರೆ. ಈ ವೇಳೆ ಹರಿಹರಪುರ ಠಾಣಾಕಾರಿ ಶ್ರೀಧರ್ ನಾಯ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net