ಮರಳು ಅಕ್ರಮ ಸಾಗಾಟ, 4 ಟ್ರ್ಯಾಕ್ಟರ್ ವಶಕ್ಕೆ

11 lxr 4
Published on

ಲಕ್ಷ್ಮೇಶ್ವರ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಟ್ರ್ಯಾಕ್ಟರ್​ಗಳನ್ನು ಪಟ್ಟಣದ ಪಿಎಸ್​ಐ ಶಿವಕುಮಾರ ಲೋಹಾರ ಅವರು ಶನಿವಾರ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್ಲೆಡೆ ಕರೊನಾ ಸೋಂಕಿನ ಹಾವಳಿಯಿಂದ ಜನತೆ ತತ್ತರಿಸಿದ್ದು ಪೊಲೀಸ್, ಕಂದಾಯ ಇಲಾಖೆ ಅಧಿಕಾರಿಗಳು ಕರೊನಾ ತಡೆಗಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ ಇತ್ತ ಮರಳು ದಂಧೆಕೋರರು ಮಾತ್ರ ಇದೇ ಸಂದರ್ಭವನ್ನು ಬಳಸಿಕೊಳ್ಳುತ್ತಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಪು.ಬಡ್ನಿ, ಬಟ್ಟೂರ, ಹುಲ್ಲೂರ, ಬೂದಿಹಾಳ, ಮಾಡಳ್ಳಿ ಸೇರಿ ಹಲವು ಗ್ರಾಮಗಳ ಹಳ್ಳದಿಂದ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ. ಏ. 5 ರಂದು ಪತ್ರಿಕೆ ಲಾಕ್​ಡೌನ್ ನಡುವೆಯೂ ಮಾಡಳ್ಳಿ ಗ್ರಾಮದಲ್ಲಿ ಸಾವಿರಾರು ‘ಸ್ಮಶಾನದ ಮಣ್ಣೂ ಬಿಡದ ಖದೀಮರು!’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಎಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆ ಶನಿವಾರ ದೊಡ್ಡೂರ ರಸ್ತೆಯ ಉಳ್ಳಟ್ಟಿ ಕ್ರಾಸ್ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 4 ಟ್ರ್ಯಾಕ್ಟರ್​ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net