

ಕಲಬುರಗಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ, ಸರಣಿ ಕೊಲೆ, ಪಪಾತ ಧೋರಣೆ ಕುರಿತು ಏಪ್ರಿಲ್ ೨೬ರಂದು ಸಮಿತಿ ಮುಖಂಡರ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಗಮನ ಸೆಳೆಯಲಾಗುವುದು ಎಂದು ಕಲಬುರಗಿ ಜಿಲ್ಲಾ ರೈತ ಹೋರಾಟ ಸಮಿತಿ ಮುಖಂಡ ಅವ್ವಣ್ಣ ಮ್ಯಾಕೇರಿ ಹೇಳಿದರು.
ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ಕಲಬುರಗಿಗೆ ಆಗಮಿಸಿದ್ದರು. ಆಗ ತೊಗರಿ ಬೆಳೆಗಾರರ ಸಮಸ್ಯೆಗೆ ಪರಿಹಾರ ಹಾಗೂ ಚಿತ್ತಾಪುರ ತಾಲೂಕಿನಲ್ಲಿ ಮರಳು ಅಕ್ರಮ ದಂಧೆ ತಡೆಗೆ ಸಂಬಂಧಿಸಿದಂತೆ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನನಗೆ ಅವಕಾಶ ನೀಡದೇ ಪೊಲೀಸರು ವಶಕ್ಕೆ ಪಡೆದರು. ಮುಖ್ಯಮಂತ್ರಿ ನರ‍್ಗಮಿಸಿದ ನಂತರ ಬಿಡುಗಡೆ ಮಾಡಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ರ‍್ಖಗೆ ಅವರು ಚಿತ್ತಾಪುರ ತಾಲೂಕಿನಲ್ಲಿ ಮರಳು ಅಕ್ರಮ ಗಣಿಗಾರಿಕೆ ಸಿಎಂ ಮುಂದೆ ಬಯಲಾಗುವ ಭಯದಿಂದ ಪೊಲೀಸರನ್ನು ಮುಂದೆ ಮಾಡಿ ಸಿಎಂ ಭೇಟಿಯಾಗದಂತೆ ತಡೆದಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಸಚಿವ ಪ್ರಿಯಾಂಕ್ ರ‍್ಖಗೆ ಅವರ ಬಂಡವಾಳ ಬಯಲು ಮಾಡಲಾಗುವುದು ಎಂದರು.
ಚಿತ್ತಾಪೂರ್ ತಾಲೂಕಿನಲ್ಲಿ ಅಕ್ರಮ ಮರಳು ದಂಧೆಯಿಂದ ರ‍್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆಯಾಗುತ್ತಿದೆ. ಕಾಗಿಣಾ ನದಿಯಲ್ಲಿ ಕೆಐಆರ್ಡಿಬಿ ಸಂಸ್ಥೆ ೪೦ ಎಕರೆ ಅನುಮತಿ ಪಡೆದು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವ ಮೂಲಕ ನಿಯಮ ಉಲ್ಲಂನೆ ಮಾಡುತ್ತಿದ್ದಾರೆ. ಹೀಗಾಗಿ ಖಾಸಗಿ ವ್ಯಕ್ತಿಗಳು ದುರುಪಯೋಗ ಪಡೆದು ನದಿಯ ಎರಡೂ ಕಡೆ ಶಾಶ್ವತ ರಸ್ತೆ ನರ‍್ಮಿಸಿ ೬೦&೭೦ ಅಡಿ ಆಳದಲ್ಲಿ ನಿತ್ಯ ೩೦೦ ಟಿಪ್ಪರ್ ಮೂಲಕ ಹಗಲು&ರಾತ್ರಿ ರಾಜಾರೋಷವಾಗಿ ಅಕ್ರಮ ದಂಧೆ ನಡೆಸುತ್ತಿದ್ದಾರೆ. ಈ ಮೂಲಕ ರ‍್ಕಾರಕ್ಕೆ ೧೦೦ ಕೋಟಿ ರೂ. ತೆರಿಗೆ ವಂಚನೆಯಾಗುತ್ತಿದೆ ಎಂದು ಆಪಾದಿಸಿದರು.
ಚಿತ್ತಾಪುರ ತಾಲೂಕು ಬೆಳಗುಂಪಿ, ಬಾಗೋಡಿ, ಕಾಟಮದೇವರಹಳ್ಳಿ, ಇವಣಿ ಗ್ರಾಮಗಳಲ್ಲಿ ನಾಮಕೆವಾಸ್ತೆ ಪಟ್ಟಾ ಜಮೀನಿಗೆ ಪರವಾನಿಗೆ ಪಡೆದು ನೂರಾರು ಎಕರೆ ಪ್ರದೇಶದಲ್ಲಿ ಮರಳು ತೆಗೆದು ನಿಯಮ ಉಲ್ಲಂಸಲಾಗುತ್ತಿದೆ. ತಾಲೂಕು ಟಾಸ್ಕ್ಫರ್ಸ್ ಸಮಿತಿ ಅಗತ್ಯ ಸಹಕಾರ ನೀಡುತ್ತಿದೆ. ಈ ಸಮಿತಿ ಅಧಿಕಾರಿಗಳು, ಸದಸ್ಯರನ್ನು ವಜಾಗೊಳಿಸಬೇಕು, ಅಕ್ರಮ ದಂಧೆ ಮಾಡಿದವರಿಗೆ ಶಿಕ್ಷೆ ವಿಧಿಸಬೇಕು, ರ‍್ಕಾರಕ್ಕೆ ಬರಬೇಕಾದ ತೆರಿಗೆ ಪಾವತಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡ ದಯಾನಂದ ಪಾಟೀಲ ಮಾತನಾಡಿ, ನೆಟೆ ರೋಗದಿಂದ ಹಾಳದ ತೊಗರಿಗೆ ೂಷಿಸಲಾದ ವಿಮೆ ಪರಿಹಾರ ಈವರೆಗೆ ರೈತರಿಗೆ ಪಾವತಿಯಾಗಿಲ್ಲ. ವಿಮೆ ಹಣ ಯಾವಾಗ ಪಾವತಿಸುತ್ತೀರಿ ಎಂಬುದನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಅಶೋಕ ಬಗಲಿ, ಗಿರೀಶ ಪಾಟೀಲ, ಅಶೋಕ ಬರಗಾಲಿ ಇತರರಿದ್ದರು.