ಮರಳಲ್ಲಿ ಚಿತ್ರ ಬಿಡಿಸಿ ಕರೊನಾ ಸೇನಾನಿಗಳಿಗೆ ಅಭಿನಂದನೆ

h24-Maralu Shilpi 1
Published on

ಹುಬ್ಬಳ್ಳಿ: ಕೋವಿಡ್-19 ತುರ್ತು ಸಂದರ್ಭದಲ್ಲಿ ವೈದ್ಯರು, ಶುಶ್ರೂಷಕರು, ಪೊಲೀಸರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವಯಂಸೇವಕರು, ಮಾಧ್ಯಮದವರು ಹಗಲಿರá-ಳು ಕೆಲಸ ನಿರ್ವಹಿಸá-ತ್ತಿದ್ದಾರೆ. ತಮ್ಮ ಜೀವ ಪಣRಟ್ಟು ದುಡಿಯá-ತ್ತಿರá-ವ ಲಕ್ಷಾಂತರ ಜನರಿಗೆ ಗೌರವ ಸಲ್ಲಿಸುವ, ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಶುಕ್ರವಾರ ಇಲ್ಲಿನ ಕಿಮ್್ಸ ಆವರಣದಲ್ಲಿ ಮರಳು ಶಿಲ್ಪ ರಚಿಸಲಾಗಿದೆ.

ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಕಲ್ಪನೆ, ಆಶಯಗಳಿಗೆ ಕಲಾವಿದ ಧಾರವಾಡದ ಮಂಜುನಾಥ ಹಿರೇಮಠ ಕಲೆಯ ರೂಪ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.

10 ಚದರ ಅಡಿ ವಿಸ್ತೀರ್ಣ, ನೆಲದಿಂದ ಓರೆಯಾಗಿ ಆರು ಅಡಿ ಎತ್ತರದ ಕಲಾಕೃತಿಯನ್ನು ಮರಳಿನಲ್ಲಿ ರಚಿಸಿ ನೈಸರ್ಗಿಕ ಬಣ್ಣ ಬಳಿದು ರಚಿಸಲಾಗಿದೆ. ಕಲಾವಿದ ಮಂಜುನಾಥ ಹಿರೇಮಠ ನಾಲ್ಕು ತಾಸು ಶ್ರಮವಹಿಸಿ ಮರಳು ಶಿಲ್ಪಕ್ಕೆ ಅಂತಿಮ ಸ್ಪರ್ಶ ನೀಡಿದ್ದಾರೆ. ವಿಶ್ವವನ್ನು ಆವರಿಸಿರುವ ಕರೊನಾ ಸೋಂಕು ಭಾರತದೊಳಗೆ ತನ್ನ ಕಬಂಧ ಬಾಹುವನ್ನು ಚಾಚದಂತೆ ಮಾಸ್ಕ್ ಧರಿಸಿದ ಪೊಲೀಸ್, ವೈದ್ಯಕೀಯ ಸಿಬ್ಬಂದಿ, ಪೌರಕಾರ್ವಿುಕರು ತಡೆಹಿಡಿದಿರುವ ಚಿತ್ರವಿದು. ಜನರಿಗೆ ಕರೊನಾ ತಿಳಿವಳಿಕೆ ನೀಡುತ್ತಿರುವ ಮಾಧ್ಯಮಗಳ ಸೂಚಕವಾಗಿ ಟಿವಿ ಲೋಗೋ, ಲೇಖನಿ ಚಿತ್ರ ಬಿಡಿಸಲಾಗಿದೆ. ಕರೊನಾ ಸೈನಿಕರನ್ನು ಗೌರವಿಸೋಣ ಎಂಬ ಉಕ್ತಿ ಅಡಿಯಲ್ಲಿದ್ದು, ಬಹು ಆಕರ್ಷಣೆಯಿಂದ ಕೂಡಿದೆ.

ಸಚಿವ ಜಗದೇಶ ಶೆಟ್ಟರ್ ಚಿತ್ರ ವೀಕ್ಷಿಸಿ ಖುಷಿ ವ್ಯಕ್ತಪಡಿಸಿದರು. ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರು, ಶುಶ್ರೂಷಕರು, ಪೊಲೀಸರು, ಪೌರಕಾರ್ವಿುಕರು, ಮಾಧ್ಯಮದವರು ನಿತ್ಯ ಸೋಂಕಿತರು, ಪ್ರಾಥಮಿಕ ಹಂತದಲ್ಲಿ ಸಂಪರ್ಕಕ್ಕೆ ಬಂದವರ ಮಾಹಿತಿ ಸಂಗ್ರಹಿಸá-ತ್ತಿದ್ದಾರೆ. ಕಿಮ್್ಸ ವೈದ್ಯರ ಪರಿಶ್ರಮದಿಂದಾಗಿ ಜಿಲ್ಲೆಯ ಇಬ್ಬರು ಕೋವಿಡ್-19 ರೋಗಿಗಳು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಎಂಎಲ್​ಸಿಗಳಾದ ಶ್ರೀನಿವಾಸ ಮಾನೆ, ಎಸ್.ವಿ. ಸಂಕನೂರ, ಜಿಲ್ಲಾಧಿಕಾರಿ ದೀಪಾ ಚೋಳನ್, ಹು-ಧಾ ಪೊಲೀಸ್ ಆಯುಕ್ತ ಆರ್. ದಿಲೀಪ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ಹುಬ್ಬಳ್ಳಿ ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಕಲಾವಿದ ಮಂಜುನಾಥ ಹಿರೇಮಠ, ಇತರರಿದ್ದರು.

ಹಂತ ಹಂತವಾಗಿ ಉದ್ದಿಮೆ ಆರಂಭ
ಕೇಂದ್ರ ಸರ್ಕಾರದ ನಿಯಮಾವಳಿಗಳಂತೆ ಮೊದಲ ಹಂತದಲ್ಲಿ ಗ್ರಾಮೀಣ ಭಾಗ, ಅಗತ್ಯ ವಸ್ತುಗಳನ್ನು ನಿರ್ವಿುಸುವ ಕೈಗಾರಿಕೆ ತೆರೆಯಲು ಅನುಮತಿ ನೀಡಲಾಗಿದೆ. ಇದರ ಪರಿಣಾಮ ಅವಲೋಕಿಸಿ ಹಂತ ಹಂತವಾಗಿ ಉದ್ದಿಮೆಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಹುಬ್ಬಳ್ಳಿ ಕಂಟೈನ್​ವೆುಂಟ್ ಝೋನ್ ಹೊರತುಪಡಿಸಿ ಬೇರೆ ಸ್ಥಳ, ಧಾರವಾಡದ ಬೇಲೂರಿನಲ್ಲಿ ಕೈಗಾರಿಕೆಗಳು ಪುನರಾರಂಭವಾಗಿ ಉತ್ಪಾದನೆ ಚಟುವಟಿಕೆ ನಡೆಯಲಿವೆ ಎಂಬ ಆಶಯ ಸರ್ಕಾರಕ್ಕಿದೆ. ಇನ್ನಷ್ಟು ಸೋಂಕಿತರ ವರದಿ ನೆಗೆಟಿವ್ ಬಂದರೆ ಉದ್ದಿಮೆಗಳನ್ನು ತೆರೆಯಬಹುದು. ಪಾದರಾಯನಪುರದಲ್ಲಿ ಗಲಾಟೆ ಮಾಡಿದವರನ್ನು ರಾಮನಗರಕ್ಕೆ ಸ್ಥಳಾಂತರಿಸಿದ್ದಕ್ಕೆ ಎಚ್.ಡಿ. ಕುಮಾರಸ್ವಾಮಿ ತಪ್ಪು ತಿಳಿಯಬಾರದು. ಇದರಲ್ಲಿ ರಾಜಕೀಯ ಮಾಡಬಾರದು. ಎಲ್ಲಿ ಭದ್ರತೆ ಇದೆ ಎಂಬುದನ್ನು ಗಮನಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net