

ಹೊಸಪೇಟೆ: ವಿಜಯನಗರ ನಾಗರಿಕರು ವೇದಿಕೆ ವತಿಯಿಂದ ಬಳ್ಳಾರಿ ಲೋಕಸಭೆ ಸಮಗ್ರ ಅಭಿವೃದ್ಧಿಗೆ ಪ್ರಜಾ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ನೂತನ ಸಂಸದರು ಅನುಷ್ಠಾನಗೊಳಿಸಬೇಕು ಎಂದು ನಂದಿಪುರ ಶ್ರೀ ಕ್ಷೇತ್ರದ ಮಹೇಶ್ವರ ಸ್ವಾಮಿಜಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದರು. ಲೋಕಸಭಾ ಸದಸ್ಯರು ಮತದಾರರಿಗೆ ಹೆಚ್ಚು ಉತ್ತರದಾಯಿತ್ವವನ್ನಾಗಿಸುವ ಹಾಗೂ ತಳಮಟ್ಟದಲ್ಲಿ ಮತದಾರರು ತಮ್ಮ ಕ್ಷೇತ್ರದ ಅಭಿವೃದ್ಧಿಯ ಆಡಳಿತದಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಪ್ರಜಾ ಪ್ರಣಾಳಿಕೆ ಅಗತ್ಯವಾಗಿದೆ. ಹೀಗಾಗಿ ಪಕ್ಷಗಳಿಂದ ಪ್ರಜೆಗಳಿಗೆ ಪ್ರಣಾಳಿಕೆ ಆರ್ಪಿಸುವುದಕ್ಕಿಂತ ಪ್ರಜೆಗಳೆ ತಮ್ಮ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಭAದಿಸಿದ ಪ್ರಜಾ ಪ್ರಣಾಳಿಕೆ ರೂಪಿಸುವುದು ಹೆಚ್ಚು ಸಮಂಜಸವೆನಿಸುತ್ತದೆ ಎಂದರು.
ಹೊಸಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಕೇಂದ್ರ ಸರ್ಕಾರದ ಸಹಕಾರ ಮತ್ತು ಆರ್ಥಿಕ ನೆರವು. ಬಳ್ಳಾರಿ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತರಿತ್ತವಾಗಿ ಪೂರ್ಣಗೊಳಿಸಿ ಲೋಕರ್ಪಣೆ ಮಾಡುವುದು. ದರೋಜಿ-ಕಂಪ್ಲಿ-ಗAಗಾವತಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ. ಹಂಪಿಯನ್ನು ಅಂತರಾಷ್ಟ್ರೀಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸಲು ಕ್ರಮವಹಿಸುವುದು. ಬಳ್ಳಾರಿ, ಕಂಪ್ಲಿ, ಕುರುಗೊಡು, ಸಿರುಗುಪ್ಪ ತಾಲುಕುಗಳಲ್ಲಿ ಎರಡನೇ ಬೆಳೆಗೆ ಅನುಕೂಲವಾಗುವಂತೆ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡುವುದು.
ಪುರಾತನ ವಿಜಯನಗರ ಕಾಲುವೆಗಳಿಗೆ ನೀರು ಹಂಚಿಕೆ ಪ್ರಮಾಣವನ್ನು ಶಾಸನಬದ್ಧ ಗೊಳಿಸುವುದು. ಹೊಸಪೇಟೆ ರೈಲು ನಿಲ್ದಾಣದ ವಿಸ್ತರಣೆ, ನೂತನವಾಗಿ ಎರಡು ಪ್ಲಾಟ್ ಫಾರಂ ನಿರ್ಮಾಣ, ಪಿಟ್ ಲೈನ್ ನಿರ್ಮಾಣ, ಕಾರಿಗನೂರಿನಲ್ಲಿ ಗೂಡ್ಸ್ ಗಾಡಿಗಳ ಕಾರ್ಯಗಾರ ಸ್ಥಾಪನೆ. ಹರಪನಹಳ್ಳಿ-ಹಡಗಲಿ, ಮುಂಡರಗಿ-ಗದಗ ನಡುವೆ ನೂತನ ರೈಲು ಮಾರ್ಗ ನಿರ್ಮಾಣ. ಮರಿಯಮ್ಮಹಳ್ಳಿ-ಹಗರಿಬೊಮ್ಮನಹಳ್ಳಿ-ಹರಪನಹಳ್ಳಿ ಹರಿಹರ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಣಾಳಿಕೆಯಲ್ಲಿ ಒತ್ತಾಯಿಸಲಾಗಿದೆ ಎಂದರು.
ಮರಿಯಮ್ಮನಹಳ್ಳಿಯ ಒಪ್ಪೇತ್ತೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜೀ, ವೇದಿಕೆ ಅಧ್ಯಕ್ಷ ವೈ.ಯಮುನೇಶ್, ಉಪಾಧ್ಯಕ್ಷ ಪ್ರೊ.ಉಮಾಮಹೇಶ್ವರ್, ಕಾರ್ಯದರ್ಶಿ ಯು.ಆಂಜನೇಯಲು ಇತರರಿದ್ದರು.